ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ರಾಷ್ಟ್ರೀಯ ಹೆದ್ದಾರಿ 66 ಕಾರವಾರದಲ್ಲಿ ಕೆಎಸ್ಆರ್ಟಿಸಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಕಾರವಾರದ ದಿವೇಕರ್ ಕಾಲೇಜು ಬಳಿ ಈ ಘಟನೆ ನಡೆದಿದೆ. ಮೈಕಲ್ ನರೋನಾ(42) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಅರುಣ ನಾಯ್ಕ ಗಾಯಗೊಂಡಿದ್ದಾನೆ. ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕೋಡಿಭಾಗ ಕಡೆಯಿಂದ ಕಾರವಾರ ಕಡೆ ಕೆಎಸ್ಆರ್ಟಿಸಿ ಬಸ್ ತೆರಳುತ್ತಿತ್ತು. ಹಿಂಬದಿಯಲ್ಲಿ ಬೈಕ್ ಮತ್ತು ಅದರ ಹಿಂಬದಿಯಲ್ಲಿ ಬೊಲೇರೋ ವಾಹನವಿತ್ತು. ಬೊಲೆರೋ ವಾಹನ ಬೈಕ್ ಗೆ ಢಿಕ್ಕಿ ಹೊಡೆದಿದ್ದರಿಂದ ಬೈಕ್ ಬಸ್ಗೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸವಾರ ಸಾವನ್ನಪ್ಪಿದ್ದಾನೆ. ಕಾರವಾರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಮತ್ತೆ ಜೈಲಿಗೆ ನಟ ದರ್ಶನ್. ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಪಡಿಸಿದ ಸುಪ್ರಿಮಕೋರ್ಟ್.
ಶಾಸಕರ ಮನೆಯಲ್ಲಿ ಬೆಳಿಗ್ಗೆವರೆಗೆ ಮುಂದುವರಿದ ಇಡಿ ತಪಾಸಣೆ. ಎರಡು ಟ್ರಂಕ್ ನಷ್ಟು ನಗದು ಜಪ್ತಿ ಸಾಧ್ಯತೆ.