ಭಟ್ಕಳ(Bhatkal) : ಕರೋನಾ ಕಾಲದಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ತರುಣನೋರ್ವ ರಸ್ತೆ ಅಪಘಾತದಲ್ಲಿ (Accident) ಸಾವನ್ನಪ್ಪಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ರೂಪೇಶ ಗೋವಿಂದ ದೇವಾಡಿಗ ಮೃತ ದುರ್ದೈವಿ. ತಾಲೂಕಿನ ಮುಂಡಳ್ಳಿ ನಿವಾಸಿಯಾಗಿರುವ ರೂಪೇಶ್ ತನ್ನ ಸ್ನೇಹಿತನೋರ್ವನ ಜೊತೆಗೆ ಬೈಕ್ ನಲ್ಲಿ ಬರುತ್ತಿದ್ದಾಗ ಅವಘಡ ಸಂಭವಿಸಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66(Nh 66) ಶಿರಾಲಿ ಚೆಕ್ ಪೋಸ್ಟ್ (Shirali Check post) ಬಳಿ ಈ ಅಪಘಾತ ಸಂಭವಿಸಿದ್ದು, ಹೆದ್ದಾರಿಗೆ ಹಾಕಿದ ಹಂಪ್ ಗಮನಿಸದೆ   ಒಮ್ಮೆಲೆ ಬೈಕ್ ಬ್ರೇಕ್ ಹಾಕಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಮುರ್ಡೇಶ್ವರದಿಂದ ಭಟ್ಕಳ (Murdeshwar to Bhatkal) ಕಡೆ ಬೈಕ್ ನಲ್ಲಿ ಬರುತ್ತಿದ್ದರು. ತೀವ್ರ ಗಾಯಗೊಂಡ ರೂಪೇಶ್ ಅವರನ್ನ ಮಣಿಪಾಲ ಆಸ್ಪತ್ರೆಗೆ(Manipal) ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇವರ ಜೊತೆ ಇದ್ದ ಸುಬ್ರಾಯ ದೇವಾಡಿಗ ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Bhatkal Rural Station)ಪ್ರಕರಣ ದಾಖಲಾಗಿದೆ.

ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಮೃತ ರೂಪೇಶ್ ಕರೋನಾ ಸಂದರ್ಭದಲ್ಲಿ(Carona Time) ನೂರಾರು ಜನರಿಗೆ ಔಷಧವನ್ನ ಮತ್ತು ಅವಶ್ಯ ವಸ್ತುಗಳನ್ನ ಮನೆಗೆ ಪೂರೈಸಿ ಸಹಾಯ ಮಾಡಿದ್ದರು. ಭಟ್ಕಳ ತಾಲೂಕಿನಲ್ಲಿ ತಮ್ಮದೇ ಬಳಗವನ್ನ ಹೊಂದಿದ್ದ ರೂಪೇಶ್ ಎಲ್ಲರೊಂದಿಗೆ ಆತ್ಮೀಯರಾಗಿ ನಗುನಗುತ್ತಾ ಇರುತ್ತಿದ್ದರು. ಅವರ ಸಾವಿನಿಂದ ಹಿರಿಕಿರಿಯ ಗೆಳೆಯರ ಬಳಗಕ್ಕೆ ಶಾಕ್ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಟ್ಕಳ ಜನತೆ ಪ್ರಾರ್ಥಿಸಿದ್ದಾರೆ.

ಇದನ್ನು ಓದಿ : ಇ ಸಮಾಚಾರ ನ್ಯೂಸ್ ಇಂಪ್ಯಾಕ್ಟ್. ಬೈತಕೋಲ್ ನಲ್ಲಿ ಬಿದ್ದ ಕಸ ಕ್ಲೀನ್.

ಭಟ್ಕಳದಲ್ಲಿ ಹಿಂದೂಗಳ ವಿರಾಟ್ ದರ್ಶನ.

ಕುಡ್ಲೆ ಬೀಚಿನಲ್ಲಿ ಇನ್ನಿಬ್ಬರು ಪ್ರವಾಸಿಗರ ರಕ್ಷಣೆ.