ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ/ಮಂಗಳೂರು/ಉಡುಪಿ : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ(Coastal District) ಅಗಸ್ಟ್ 18ರಂದು ಬಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆಯನ್ನು ನೀಡಿ ರೆಡ್ ಅಲರ್ಟ್(Red Alert) ಘೋಷಿಸಿದೆ.
ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಎಚ್ಚರಿಕೆ ವಹಿಸುವಂತೆ ಆದೇಶಿಸಿದ್ದಾರೆ. ಉತ್ತರಕನ್ನಡ(Uttarakannada) ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ(DC Lakshmipriya), ಉಡುಪಿ(Udupi) ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ(Swaroop T K). ಅವರು ಆದೇಶ ಹೊರಡಿಸಿ ಆಗಸ್ಟ್ 19 ರವರೆಗೂ ರೆಡ್ ಅಲರ್ಟ್ ಮುಂದುವರೆಯುವ ಬಗ್ಗೆ ತಿಳಿಸಿದ್ದಾರೆ.
ಅಗಸ್ಟ್ 18 ಮತ್ತು 19 ಎರಡು ದಿನಗಳ ಕಾಲ ಅತೀ ಹೆಚ್ಚು ಅಥವಾ ಅತಿಯಾದ ಮಳೆಯೊಂದಿಗೆ ಪ್ರಬಲ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ(Metrology Department) ಎಚ್ಚರಿಸಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಅದೇ ರೀತಿ ಸಮುದ್ರದತ್ತ ತೆರಳದಂತೆ ಸೂಚಿಸಲಾಗಿದೆ. ಪ್ರವಾಹ ಅಥವಾ ಭೂಕುಸಿತ(Landslide) ಸಂಭವಿಸುವ ಸಾಧ್ಯತೆಗಳ ಬಗ್ಗೆ ನಿಗಾ ವಹಿಸಲು ವಿಪತ್ತು ನಿರ್ವಹಣಾ ತಂಡಗಳನ್ನು ಸಿದ್ಧಪಡಿಸಲಾಗಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಅತ್ಯಧಿಕ 204.5 ಮಿ.ಮೀ ಗಿಂತ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನೂ ಹಾಸನ, ಕೊಡಗು, ಮೈಸೂರು, ಬೆಳಗಾವಿ, ಗದಗ ಮತ್ತು ಹಾವೇರಿಯಲ್ಲೂ ಮಳೆಯಾಗುವ ಬಗ್ಗೆ ತಿಳಿಸಿದ್ದು ಜನತೆಎಚ್ ತಿಳಿಸಲಾಗಿದೆ.
ಇದನ್ನು ಓದಿ : ಕಾರವಾರದ ಯೋಧನಿಗೆ ತವರೂರಲ್ಲಿ ಅಂತಿಮ ವಿದಾಯ. ನೌಕಾಪಡೆಯಿಂದ ಗೌರವ.
ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ – ಜಿಲ್ಲಾಧಿಕಾರಿ ಆದೇಶ