ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಭಾನುವಾರ ರಾತ್ರಿ ನಭೋಮಂಡಲದಲ್ಲಿ ನಡೆದ ಚಂದ್ರಗ್ರಹಣದ(Lunar Eclipse) ಚಮತ್ಕಾರವನ್ನ ದೇಶದ ನಾನಾ ಭಾಗಗಳಿಂದ ಜನ ವೀಕ್ಷಿಸಿದರು.
ಬೆಂಗಳೂರು(Bangalore), ದೆಹಲಿ(Delhi), ಮುಂಬೈ(Mumbai), ಅಹಮದಾಬಾದ್(Ahamadabad), ಜೈಪುರ(Jaipur), ಕೋಲ್ಕತ್ತಾ(Kolkatta), ಚೆನ್ನೈ(Chennai), ಹೈದರಾಬಾದ್(Hydrabad) ಸೇರಿದಂತೆ ಹಲವೆಡೆ ರಾಹುಗ್ರಸ್ಥ ಚಂದ್ರಗ್ರಹಣ ಗೋಚರಿಸಿತು. ಇದು 2025 ರ ಅತ್ಯಂತ ಅಪರೂಪದ ಘಟನೆ ಎಂದು ಹೇಳಲಾಗುತ್ತಿದೆ.
ಭಾನುವಾರ ರಾತ್ರಿ 9.56 ಕ್ಕೆ ಪ್ರಾರಂಭವಾದ ಗ್ರಹಣವು ಸೋಮವಾರ ಬೆಳಿಗ್ಗೆ 1.26 ಕ್ಕೆ ಕೊನೆಗೊಂಡಿತು. ಒಟ್ಟು ಅವಧಿ 3 ಗಂಟೆ 30 ನಿಮಿಷಗಳ ಕಾಲ ನಭೋಮಂಡಲದಲ್ಲಿ ಕೆಂಪುಕೆಂಪಾಗಿ ಚಂದ್ರ ಗೋಚರಿಸಿದ. ಗ್ರಹಣದ ಸಮಯದಲ್ಲಿ ಚಂದ್ರನ ಬಣ್ಣ ಕಪ್ಪು ಅಥವಾ ನೀಲಿ ಬಣ್ಣದ್ದಾಗಿರದೇ, ಕೆಂಪು ಬಣ್ಣದ್ದಾಗಿತ್ತು. ಅದಕ್ಕಾಗಿಯೇ ಇದನ್ನು ‘ರಕ್ತ ಚಂದ್ರ’ ಎಂದು ಕರೆಯಲಾಯಿತು. ಭೂಮಿಯು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿದಾಗ, ‘ರಕ್ತ ಚಂದ್ರ’ದ(BloodMoon) ಅಪರೂಪದ ನೋಟ ಗೋಚರಿಸಿತು.
ಭಾನುವಾರ ನಡೆದ ಈ ಗ್ರಹಣವು ಈ ವರ್ಷದ ಎರಡನೇ ಚಂದ್ರಗ್ರಹಣವಾಗಿತ್ತು. ಮಾರ್ಚ್ 14ರಂದು ನಡೆದ ಮೊದಲ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸಲಿಲ್ಲ. ಈ ವರ್ಷದ ಕೊನೆಯ ಸೂರ್ಯಗ್ರಹಣ ಸೆಪ್ಟೆಂಬರ್ 21 ರಂದು ನಡೆಯಲಿದೆ. ಆದರೆ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಇದನ್ನು ಓದಿ : ಬೆಣ್ಣೆಹೊಳೆಯಲ್ಲಿ ಜಾರಿ ಬಿದ್ದು ಅರಣ್ಯ ವಿದ್ಯಾರ್ಥಿ ನಾಪತ್ತೆ. ಈಜು ತಜ್ಞರಿಂದ ಶೋಧ.