ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಕಂದಾಯ ಇಲಾಖೆಯಲ್ಲಿ(Revenue Department) ಏಜೆಂಟರುಗಳ ಹಾವಳಿ ಜಾಸ್ತಿಯಾದ ಬಗ್ಗೆ  ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ(Mankal Vaidya) ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

  ಇಲ್ಲಿನ ತಾಲೂಕು ಪಂಚಾಯತ ಸಭಾಗ್ರಹದಲ್ಲಿ ಆರೋಗ್ಯ, ಶಿಕ್ಷಣ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಕಂದಾಯ ಇಲಾಖೆಯನ್ನು(Revenue Department) ಉದ್ದೇಶಿಸಿ ಮಾತನಾಡಿದ ಸಚಿವರು ಕಂದಾಯ ಇಲಾಖೆಯಲ್ಲಿ ನೀವೇ ಏಜೆಂಟರನ್ನು ರೆಡಿ ಮಾಡುತ್ತಿದ್ದೀರಾ. ನಿಮಗೆ ಉದಾಹರಣೆ ಕೊಡುತ್ತೇನೆ. ಒಂದೂ ಹೋಟೆಲ್ ಓಪನ್ ಇದ್ದು, ಅದಕ್ಕೆ ಸಂಬಂಧಿಸಿದ ಲೈಸನ್ಸ್ ಮಾಡಿಕೊಡುವುದಿಲ್ಲ ಎಂದರೆ ಅದಕ್ಕೆ ಜವಾಬ್ದಾರಿ ಯಾರು. ಕಂದಾಯ ಇಲಾಖೆಯಷ್ಟು ಕೆಟ್ಟ ಇಲಾಖೆ ಭಟ್ಕಳದಲ್ಲಿ ಯಾವುದು ಇಲ್ಲ. ಗನ್ ರಿನೀವಲ್ ಹಾಗೂ ಇನ್ನಿತರ ಯಾವುದೇ ಕೆಲಸ ಮಾಡಿಕೊಳ್ಳಲು ಎಜೆಂಟರನ್ನು ಹುಡುಕಿಕೊಂಡೆ ನಿಮ್ಮ ಇಲಾಖೆಗೆ ಬರಬೇಕಾದ ಪರಿಸ್ಥಿತಿ ಬಂದಿದೆ. ಬಡವರು ಯಾರೇ ಬರಲಿ ಆರ್‌ಟಿ ಸಿ(RTC), ಎನ್.ಎ(N.A), ಯಾವುದೇ ರೀತಿಯ ಕೆಲಸ ಇರಲಿ ಅವರು ಏಜೆಂಟರನ್ನು ಹುಡುಕಿಕೊಂಡೆ ಕೆಲಸ ಮಾಡಿಕೊಳ್ಳುವ ಪರಿಸ್ಥಿತಿ ತಂದಿಟ್ಟಿದ್ದೀರಿ ಎಂದು ಕಿಡಿಕಾರಿದರು.

ಆರೋಗ್ಯ ಇಲಾಖೆಯ(Health Department) ಪ್ರಗತಿ ಪರಿಶೀಲನೆ ವೇಳೆ ಸಭೆಗೆ ಹಾಜರಿದ್ದ ತಾಲೂಕಾ ವೈದ್ಯಾಧಿಕಾರಿ ಡಾ. ಅರುಣ ಕುಮಾರ ಅವರೊಂದಿಗೆ ಚರ್ಚೆ ಮಾಡಿದ ಸಚಿವರು ಆಸ್ಪತ್ರೆಗೆ ಎಲ್ರೂ ಬರ್ತಾರೆ ಎಲ್ರೂ ಹೋಗ್ತಾರೆ ಏನು ಮಾಡೋಕೆ ಆಗಲ್ಲ. ಈಗ ವಾಟ್ಸಾಪ್, ಫೇಸ್ಬುಕ್ ನಲ್ಲಿ ಬರ್ತಿರೋ ಡಾಕ್ಟರ್ ಗಳನ್ನು ನಾನು ಶಾಸಕನಾಗಿದ್ದ ವೇಳೆ ತಂದಿದ್ದು. ಯಾರು ಕೂಡ ವಾಟ್ಸಾಪ್, ಫೇಸ್ಬುಕ್ ನೋಡಿಕೊಂಡು ಬಂದವರಲ್ಲ. ನೀವು ಯಾವುದಕ್ಕೂ ಟೆನ್ಷನ್ ಅಗಬೇಡಿ. ಏನೇ ಇದ್ದರೂ ನೇರವಾಗಿ ಮಾತನಾಡಿ. ಆಸ್ಪತ್ರೆಗೆ ಬಡವರು ಬರ್ತಾರೆ ಅವರಿಗೆ ಒಳ್ಳೆಯ ಸೇವೆ ನೀಡಿ, ಅದು ಪುಣ್ಯದ ಕೆಲಸ ಎಂದ ಅವರು ಕಿರಿಕಿರಿ ಮಾಡಲು ಒಂದು ತಂಡ ಇರುತ್ತೆ, ಅದಕ್ಕೆ ಏನು ಮಾಡಲು ಬರುವುದಿಲ್ಲ. ನಾನು ಕೆಲಸ ಮಾಡಬಾರದು ಎಂದು ಒಂದು ತಂಡವಿದೆ. ಅವರು ಏನೆಲ್ಲ ಹೇಳುತ್ತಾ ಹೋಗುತ್ತಾರೆ. ಆದರೆ ನಾನು ಕೆಲಸ ಮಾಡುತ್ತಾ ಹೋಗುತ್ತೇನೆ. ನೀವು ಯಾವುದಕ್ಕೂ ಒತ್ತಡಕ್ಕೆ ಒಳಗಾಗಬೇಡಿ. ಎಲ್ಲಾ ವೈದರು ಬರ್ತಾರೆ, ಎಲ್ಲವನ್ನು ಭರ್ತಿ ಮಾಡಿಕೊಡುತ್ತೇನೆ. ಆಸ್ಪತ್ರೆಯಲ್ಲಿನ ಆರೋಗ್ಯ ಸಮಿತಿಗೆ ಅಧ್ಯಕ್ಷನಿದ್ದೇನೆ. ಏನೇ ಸಹಾಯ ಬೇಕಾಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ, ಪ್ರತಿ ತಿಂಗಳು ಮೀಟಿಂಗ್ ಕರೆದು ಗೊಂದಲಕ್ಕೆ ತೆರೆ ಎಳೆಯಿರಿ ಎಂದರು.

ದಸರಾ ರಜೆಯಲ್ಲಿ(Dussera Holiday) ವಿಶೇಷ ತರಗತಿ ತೆಗೆದುಕೊಂಡು ಪಠ್ಯ ಕ್ರಮಗಳನ್ನು ಮುಗಿಸಲಿದ್ದೇವೆ. 70 ಅತಿಥಿ ಶಿಕ್ಷಕರ ಜೊತೆಗೆ 12 ಶಿಕ್ಷಕರನ್ನು ಧರ್ಮಸ್ಥಳ ಸಂಘದ ಸಹಕಾರದಿಂದ ನೋಡಿಕೊಳ್ಳುತ್ತಿದ್ದೇವೆ. ಕಳೆದ 9 ವರ್ಷಗಳಿಂದ ಪದೋನ್ನತಿ ಆಗದೆ ಹಾಗೇ ಇರುವವರನ್ನು ಪದೋನ್ನತಿಗೊಳಿಸಲು ಸಹಕರಿಸಿದ ಸಚಿವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭಿನಂದಿಸಿದರು.

ತಾಲೂಕಿನಲ್ಲಿ 69 ಬಸ್ ಗಳಿದ್ದು ಉತ್ತಮ ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ 16 ಹೊಸ ಬಸ್ ಗಳನ್ನು ನೀಡಲಾಗಿದೆ. 27 ಜನರ ವರ್ಗಾವಣೆಯಿಂದ ಹೊಸ ಸಿಬ್ಬಂದಿ ಆ ಜಾಗಕ್ಕೆ ಬರದೇ ಇರುವುದರಿಂದ ಸಮಸ್ಯೆ ಆಗುತ್ತಿರುವುದನ್ನು ಸಚಿವರ ಗಮನಕ್ಕೆ ತಂದಾಗ ವರ್ಗಾವಣೆ ಆದ ಜಾಗಕ್ಕೆ ಹೊಸ ಸಿಬ್ಬಂದಿಗಳು ಬರುವ ತನಕ ಇಲ್ಲಿನ ಸಿಬ್ಬಂದಿಗಳನ್ನು ಯಾಕೆ ವರ್ಗಾವಣೆ ಮಾಡಿದ್ದೀರಿ ಎಂದರು.

ರಾತ್ರಿ ಹೊನ್ನಾವರಕ್ಕೆ(Honnavar) ಪ್ರಯಾಣಿಸುವ ಪ್ರಯಾಣಿಕರು ಹೆದ್ದಾರಿಯಲ್ಲಿ ಕಾಯುತ್ತಿರುವುದು ಗಮನಕ್ಕೆ ಬಂದಿದ್ದು ರಾತ್ರಿ 8 ಘಂಟೆಗೆ ಇನ್ನೊಂದು ಬಸ್ ಬಿಡುವುದರಿಂದ ಬಸ್ತಿ, ಬೈಲೂರು, ಅನಂತವಾಡಿ, ಮಂಕಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು. ಈ ಮೊದಲು ಪ್ರತಿ 15 ನಿಮಿಷಕ್ಕೆ ಒಂದರಂತೆ ಬಸ್ ಬಿಡಲಾಗುತ್ತಿದ್ದು, ಅದನ್ನು ಪುನಃ ಬಿಡುವಂತೆ ಸಭೆಯಲ್ಲಿ ತಿಳಿಸಿದರು.

ಭಟ್ಕಳದಲ್ಲಿ(Bhatkal) ಹೊಸ ನ್ಯಾಯಾಲಯ ಕಟ್ಟಡಕ್ಕೆ 12 ಕೋಟಿ ಹಾಗೂ ನ್ಯಾಯಾಧೀಶರ ವಸತಿ ಕಟ್ಟಡಕ್ಕೆ 2 ಕೋಟಿ ಮಂಜೂರಿ ಮಾಡಲಾಗಿದ್ದು, ಸದ್ಯದಲ್ಲೇ ಹಸ್ತಾಂತರಿಸಲಾಗುವುದು ಎಂದರು.

ಮುರ್ಡೇಶ್ವರ ಕೊಡ್ಸುಳ ಶಾಲೆಗೆ ಒಬ್ಬರು ದಾನಿಗಳು ಒಂದು ಕೋಟಿ ಮೌಲ್ಯದ ಕಟ್ಟಡ ನಿರ್ಮಿಸಲು ಮುಂದಾಗಿದ್ದು, ಅವರಿಗೆ ಬೇಕಾದ ಅಗತ್ಯ ಸಹಾಯ- ಸಹಕಾರ ನೀಡಿ ಎಂದು ಶಿಕ್ಷಣ ಇಲಾಖೆಗೆ ತಿಳಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ, ಜನ ಸಾಮಾನ್ಯರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು ಸಚಿವರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಪ್ರಭಾರ ಅಧ್ಯಕ್ಷ ಅಲ್ತಾಪ್ ಖರೂರಿ, ತಹಸೀಲ್ದಾರ ನಾಗೇಂದ್ರ ಕೊಳಶೆಟ್ಟಿ, ತಾಲ್ಲೂಕು ಪಂಚಾಯತ ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ ಉಪಸ್ಥಿತರಿದ್ದರು.

ಇದನ್ನು ಓದಿ : ಬೆಳಗಾವಿಯ ಆಸ್ಪತ್ರೆಯಲ್ಲಿ ಆತಂಕ ಮೂಡಿಸಿದ್ದ  ಕಾರವಾರ ಮೂಲದ ಯುವತಿ.

ಬೆಂಗಳೂರಿನಲ್ಲಿ ಶಾಸಕ ಸತೀಶ ಸೈಲ್ ಬಂಧಿಸಿದ ಇಡಿ ಅಧಿಕಾರಿಗಳು. ಕೇಸ್ ಹಿಸ್ಟ್ರೀ ಏನು?

ಕಟ್ಟುನಿಟ್ಟಿನ ನಿಯಮದಿಂದ  ಕಂಗಾಲಾದ ನಟ. ನ್ಯಾಯಾಧೀಶರ ಬಳಿ ಕೇಳಿದ್ದೇನು?

ದೇವಾಲಯದಲ್ಲಿ ಕಳ್ಳರ ಕರಾಮತ್ತು. ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ  ಕಳ್ಳತನ.