ಕಾರವಾರ(Karwar) : ತಿರುಪತಿಯಿಂದ ಮುರ್ಡೇಶ್ವರಕ್ಕೆ(Tirupati to Murdeshwar) ಬರುವ ತಿರುಪತಿ ರೈಲನ್ನು ಗೋಕರ್ಣದವರೆಗೆ (Gokarn)ವಿಸ್ತರಿಸಿ ಎಂದು ಉತ್ತರಕನ್ನಡ ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿ ರಾಜೀವ್ ಗಾಂವಕರ್ ಅವರು `ಕೊಂಕಣ ರೈಲ್ವೆ ಆರ್‌ಆರ್‌ಎಂ(Konkan Railway RRM) ಆಶಾ ಶೆಟ್ಟಿಗೆ ಮನವಿ ಮಾಡಿದ್ದಾರೆ.

ಆಶಾ ಶೆಟ್ಟಿಯವರನ್ನು ಭೇಟಿ ಮಾಡಿ ಚರ್ಚಿಸಿದ ರಾಜೀವ ಗಾಂವಕರ, ತಿರುಪತಿ ರೈಲನ್ನು ಗೋಕರ್ಣದವರೆಗೆ ವಿಸ್ತರಣೆ ಮಾಡುವಂತೆ ಈಗಾಗಲೇ ಕುಮಟಾ ಶಾಸಕ ದಿನಕರ ಶೆಟ್ಟಿ(Kumta MLA Dinakar Shetti) ಪತ್ರ ಬರೆದಿದ್ದಾರೆ ಎಂದು ಗಮನಸೆಳೆದರು.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದ ಕೆಲವು ವಿಷಯಗಳ ಕುರಿತು ಚರ್ಚಿಸಿದ ರಾಜೀವ ಗಾಂವಕರ, ಕುಮಟಾದಲ್ಲಿ (Kumta) 2 ನೇ ಎತ್ತರದ ಫ್ಲ್ಯಾಟ್ ಫಾರ್ಮ್ ನಿರ್ಮಾಣ ಮಾಡುವಂತೆ, ರೈಲು ವೇಳಾಪಟ್ಟಿಯಲ್ಲಿ ಸಮಯ ಪ್ರಜ್ಞೆಯನ್ನು ಕಾಪಾಡಿಕೊಳ್ಳುವಂತೆ, ನಮ್ಮ ಜಿಲ್ಲೆಯ ಪ್ರತಿಯೊಂದು ನಿಲ್ದಾಣದಲ್ಲಿ ಪ್ರಯಾಣಿಕರ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಬಗ್ಗೆ ಒತ್ತಾಯಿಸಿದರು.

ಹೇಳಿದ ಎಲ್ಲಾ ಬೇಡಿಕೆಗಳನ್ನು ತಾಳ್ಮೆಯಿಂದ ಆಲಿಸಿದ  ಅವರು ಜನರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ತಮ್ಮ ಕೈಲಾದಷ್ಟು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕೊಂಕಣ ರೈಲ್ವೆ ಆರ್‌ಆರ್‌ಎಂ ಆಗಿ ಇತ್ತೀಚಿಗೆ ಅಧಿಕಾರ ಸ್ವೀಕರಿಸಿರುವ ಆಶಾ ಶೆಟ್ಟಿ ಅವರನ್ನು ರಾಜೀವ ಗಾಂವಕರ ಅವರು ಉತ್ತರಕನ್ನಡ ರೈಲ್ವೆ ಸೇವಾ ಸಮಿತಿಯ ಪರವಾಗಿ ಕಾರವಾರಕ್ಕೆ(Karwar) ಸ್ವಾಗತಿಸಿದರು.

ಇದನ್ನು ಓದಿ : ಬಿಜಾಡಿಯಲ್ಲಿ ಇಬ್ಬರು ಯುವಕರು ನೀರುಪಾಲು

ಭಟ್ಕಳದಲ್ಲಿ ಗಾಂಜಾವಾಲಾರ ಬಂಧನ

ರತನ್ ಟಾಟಾ ಮುದ್ದಿನ ಶ್ವಾನಕ್ಕೂ ಆದಾಯದಲ್ಲಿ ಪಾಲು