ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಳೆದ ಕೆಲ ದಿನಗಳಿಂದ ನಗರದ ಬಿಣಗಾ(Binaga) ಭಾಗದಲ್ಲಿ ಚಿರತೆ ಓಡಾಡುತ್ತಿದ್ದು ನಾಗರಿಕರು ಆತಂಕಗೊಂಡಿದ್ದಾರೆ. ನಿನ್ನೆ ರಾತ್ರಿ ನಾಗರಿಕರೊಬ್ಬರಿಗೆ ಚಿರತೆ(Leopard) ಎದುರಾಗಿದ್ದು ಎದೆ ನಡುಕುವಂತ ಸ್ಥಿತಿ ನಿರ್ಮಾಣವಾಗಿತ್ತು.
ಕಳೆದ 15 ದಿನಗಳಿಂದ ಚಿರತೆ ಕಾರವಾರ ನಗರದ ಅರಣ್ಯದಂಚಿನ ಪ್ರದೇಶದ ಸುತ್ತಮುತ್ತ ಓಡಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು ಯಾವುದೇ ಕ್ರಮ ಆಗಿಲ್ಲ ಎಂದು ಈ ಭಾಗದ ನಾಗರಿಕರು ದೂರಿದ್ದಾರೆ.
ಕತ್ತಲು ಸರಿಯುತ್ತಿದ್ದಂತೆ ಚಿರತೆ(Leopard) ಮನೆಯ ಬಳಿ, ಜಮೀನು ಪ್ರದೇಶಗಳಲ್ಲಿ ಕಾಣಿಸಿಕೊಂಡು ಸಾಕುಪ್ರಾಣಿಗಳನ್ನು ಬೇಟೆಯಾಡುತ್ತಿದೆ. ಮುಂದೆ ಏನಾದರೂ ಮನುಷ್ಯರ ಮೇಲೆ ದಾಳಿ ಮಾಡಿದರೇ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಅರಣ್ಯ ಇಲಾಖೆ ತಕ್ಷಣ ಚಿರತೆಯನ್ನು ಸೆರೆಹಿಡಿದು, ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕೆಂದು ಇಲ್ಲಿನ ನಾಗರಿಕರು ಒತ್ತಾಯಿಸಿದ್ದಾರೆ. ಚಿರತೆ ಓಡಾಟದಿಂದ ಈ ಭಾಗದ ಜನರು ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತಿದ್ದು ಅರಣ್ಯ ಇಲಾಖೆ ಏನಾದರೂ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
ಇದನ್ನು ಓದಿ : ಯುಟ್ಯೂಬರ್ ಮುಕಳೆಪ್ಪ ವಿರುದ್ದ ಭಜರಂಗ ದಳ ದೂರು. ಲವ್ ಜಿಹಾದ್ ಆರೋಪ.
ಶೀಲ ಶಂಕಿಸಿ ಪತ್ನಿ ಕೊಲೆ ಮಾಡಿದ ಪತಿ. ನಾಪತ್ತೆ ನಾಟಕವಾಡಿ ಚಿತ್ತಾಕುಲ ಪೊಲೀಸರ ಬಲೆಗೆ ಬಿದ್ದ ಆಸಾಮಿ.
/ಹೊನ್ನಾವರದಲ್ಲಿ ಯುವಕರಿಬ್ಬರ ನಡುವೆ ಜಗಳ. ಚಾಕು ಇರಿದ ಅನ್ಯಕೋಮಿನ ವ್ಯಕ್ತಿಯ ಬಂಧನ.