ಕಾರವಾರ : ಅದೆಷ್ಟೋ ಸಿನೆಮಾ(CINEMA) ಗಳಿಗೆ ಸ್ಫೂರ್ತಿಯಾಗಿದ್ದ ಕಾರವಾರದ ಕಾಳಿ ಸೇತುವೆ (KALI SETUVE) ದುರಂತ(TRAGEDY) ಅಂತ್ಯ ಕಂಡಿದೆ. ಆಗಸ್ಟ್ ಏಳರ ಕತ್ತಲ್ಲಿಯೇ ನದಿಗೆ ಬಿದ್ದು ತನ್ನ ಆಯುಷ್ಯ(LIFE) ಕಳೆದುಕೊಂಡಿದೆ.

ಕಾಳಿ ಸೇತುವೆ ಕುಸಿದಿರುವುದಕ್ಕೆ ಕಾರವಾರ ಜನತೆ(KARWAR PEOPLE) ತುಂಬಾ ಕಳೆದುಕೊಂಡಿದ್ದಾರೆ. ಸಂಪರ್ಕ ಸೇತುವಾಗಿದ್ದ ಕಾಳಿ ಸೇತುವೆ ನಿಜಕ್ಕೂ ಸುತ್ತಮುತ್ತಲಿನವರ ಆಕರ್ಷಣೆಯ ಸ್ಪಾಟ್ (SPOT) ಆಗಿತ್ತು. ಸಿನೆಮಾ ಮಾಡುವವರಿಗಂತೂ ಕಾಳಿ ಸೇತುವೆಯ ಸುತ್ತಲಿನ ನಿಸರ್ಗ ಸೌಂದರ್ಯ ಹೇಳಿ ಮಾಡಿಸಿದ ಸ್ಥಳವಾಗಿತ್ತು. ಕನ್ನಡ(KANNADA) ಮತ್ತು ಹಿಂದಿ(HINDI)ಯ ಅದೆಷ್ಟೋ ಸಿನೆಮಾದ ಚಿತ್ರೀಕರಣ ಇಲ್ಲಿ ನಡೆದಿತ್ತು. ಕನ್ನಡದ ಅದ್ಭುತ ಗೀತೆಯೊಂದು ಈಗ ಎಲ್ಲರ ಕಿವಿಯಲ್ಲಿ ಗುನುಗುನಿಸುತ್ತಿದೆ.

ಖ್ಯಾತ ನಟ ವಿಷ್ಣುವರ್ಧನ್(VISHNUVARDHANA) ಮತ್ತು ಭವ್ಯ(BHAVYA) ಅವರ ನಟನೆಯ ಹೃದಯಗೀತೆ(HRUDAYAGEETE) ಸಿನೆಮಾದ ಹಾಡು ಮತ್ತೆ ಮುನ್ನೆಲೆಗೆ ಬಂದಿದೆ. ಹೌದು. ಕಾಳಿ ನದಿಯ ಮತ್ತು ಸೇತುವೆಯ ಎಲ್ಲಾ ಕಡೆಗಳಲ್ಲೂ ಸಿನೆಮಾದ ಚಿತ್ರೀಕರಣವಾಗಿತ್ತು. ಸೂರ್ಯಾಸ್ತದ, ಅಳಿವೆ ಸಂಗಮದ ದೃಶ್ಯ ಹಾಡಿನಲ್ಲಿ ಜನ ಕಾಣುತ್ತಿದ್ದಾರೆ. ಆದರೆ ಸೇತುವೆ ನೋಡಬೇಕಂದರೆ ಹಾಡು ಕೇಳಲೇಬೇಕು. ಹೃದಯಗೀತೆ ಹಾಡುತಿದೆ, ಭೂಮಿ ಸ್ವರ್ಗವಾಗಿದೆ. ಚಿತ್ರದ ಹಾಡು(FILM SONG) ಹೇಳುವಂತೆ ಸಂಗಾತಿಗಳು ಅವರಾಗಿ ಇಲ್ಲಿಗೆ ಬರುತ್ತಿದ್ದರು. ಸೇತುವೆ ಮೇಲೆ ನಿಂತು ಸಂತೋಷದಿಂದ ಬಾಳುವ ಎನ್ನುತ್ತಿದ್ದರು. ನದಿಯು ಕಡಲು(RIVER SEA) ಸೇರಿದಂತೆ ಒಂದಾಗಿ ಶೃಂಗಾರ ಕಾಣುವ ಎಂದು ಹೇಳುವ ಸೇತುವೆ ಈಗ ಇಲ್ಲ.

ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಟ್ರೆಂಡ್(TREND) ಆಗುತ್ತಿದ್ದ ಪ್ರೀ ವೆಡ್ಡಿಂಗ್ ಶೂಟ್(FREE WEDDING SHOOT) ಕಾಳಿ ನದಿಯ ಹಳೆಯ ಸೇತುವೆ ಮೇಲೆ  ನಡೆಯುವುದು ಹೆಚ್ಚಿತು. ಇದೀಗ ಎಲ್ಲರೂ ಕೂಡ ಮಿಸ್ ಮಾಡ್ಕೊಂಡಿದ್ದಾರೆ.

ಇದನ್ನು ಓದಿ. ಪೊಲೀಸ್ ಸಿಬ್ಬಂದಿ ಸಮಯ ಪ್ರಜ್ಞೆ

ಕಾಳಿ ಸೇತುವೆ ಇನ್ನೂ ನೆನಪು ಮಾತ್ರ