ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕುಟುಂಬವೊಂದು ಸಮುದ್ರದ ಅಲೆಗೆ  ಸಿಲುಕಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಎಂಟು ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಎಂಟು ವರ್ಷದ ಕೃತೀಕ ರೆಡ್ಡಿ ಮೃತ ದುರ್ದೈವಿ. ಬೆಂಗಳೂರು ಬಿದರಳ್ಳಿಯ ಕೆ. ರವಿ ರೆಡ್ಡಿ  ತಮ್ಮ ಕುಟುಂಬದೊಂದಿಗೆ  ಭಾನುವಾರ ರಾತ್ರಿ ಮುರ್ಡೇಶ್ವರಕ್ಕೆ ಬಂದಿದ್ದರು. ಸೋಮವಾರ ಬೆಳಿಗ್ಗೆ ದೇವಸ್ಥಾನದ ಎಡಬದಿಯ ಕಡಲ ತೀರದಲ್ಲಿ ಆಟವಾಡುತ್ತಿದ್ದಾಗ ಭಾರಿ ಅಲೆ ಅಪ್ಪಳಿಸಿತು. ಅಲೆಯಲ್ಲಿ ಸಿಲುಕಿದ ವಸಂತಾ ಕೆ. (27) ಅಸ್ವಸ್ಥಳಾಗಿ ಆರ್.ಎನ್‌.ಎಸ್‌. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರವಿ ರೆಡ್ಡಿಯ ಕಿರಿಯ ಮಗ ಕೃತೀಕ ಅಲೆಯ ಹೊಡೆತಕ್ಕೆ ಸಮುದ್ರ ಪಾಲಾಗಿದ್ದನು.

ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಆಟವಾಡಲು‌ ಹೋಗಿದ್ದ ಕುಟುಂಬವೊಂದು ಮಗನನ್ನ ಕಳೆದುಕೊಂಡಿರುವುದು ದುರದೃಷ್ಟಕರವಾಗಿದೆ. ಘಟನೆಯ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಬೀದಿ ಬದಿ ತರಕಾರಿ, ಸೊಪ್ಪು ಮಾರುವ ವ್ಯಾಪಾರಿಗಳನ್ನ ಒಕ್ಕಲೆಬ್ಬಿಸಿದ ನಗರಸಭೆ ವಿರುದ್ದ ಪ್ರತಿಭಟನೆ.

GST ಜಾರಿ ಮಾಡಿದ್ದೂ ಮೋದಿ. ಹೆಚ್ಚೆಚ್ಚು ವಿಧಿಸಿದ್ದೂ ಅವರೇ. ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿಯವರೇ: ಸಿ.ಎಂ.ಸಿದ್ದರಾಮಯ್ಯ ವ್ಯಂಗ್ಯ

ಶರಾವತಿ ಉಳಿವಿಗಾಗಿ ಯುವ ಜನರ ಟ್ವೀಟರ್ ಅಭಿಯಾನಕ್ಕೆ ಪ್ಲ್ಯಾನ್.