ಶಿರಸಿ(SIRSI) :  ಸರ್ಕಾರಿ ಬಸ್(GOVERNMENT BUS) ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ (ACCIDENT) ಪತಿ ಮೃತಪಟ್ಟು ಪತ್ನಿ ಗಾಯಗೊಂಡ ಘಟನೆ ಕಾನಗೋಡು(KANAGODU) ಬಳಿ ನಡೆದಿದೆ.

ಸಿದ್ದಾಪುರ(SIDDAPURA) ತಾಲೂಕಿನ ಕೊಂಡ್ಲಿ ಗ್ರಾಮದ ಚಂದ್ರಶೇಖರ ಪಲ್ಲೇದ (55)  ಮೃತ ದುರ್ದೈವಿಯಾಗಿದ್ದಾರೆ. ಅವರ ಪತ್ನಿ ಸುಜಾತ ಬೆಲ್ಲದ್  ಗಾಯಗೊಂಡವರು.

ದಂಪತಿಗಳಿಬ್ಬರು ತಮ್ಮ ವ್ಯಾಗನರ್ ಕಾರಿನಲ್ಲಿ ಶಿರಸಿಗೆ ಬರುತ್ತಿದ್ದರು. ಶಿರಸಿಯಿಂದ ಸಾಗರ ಕಡೆ ತೆರಳುತ್ತಿದ್ದ ಸರ್ಕಾರಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ(SIRSI RURAL STATION) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಬಿಸಿಲಿನ ತಾಪಕ್ಕೆ ಯುವಕ ಸಾವು

ಎಂಟು ವಾಹನಗಳ ಅಪಘಾತ. ನಾಲ್ವರ ದುರ್ಮರಣ

ವಿಶ್ವ ದಾಖಲೆ ಬರೆದ ಪ್ರಜಾಪ್ರಭುತ್ವ ದಿನಾಚರಣೆ

ಬಾವಿಗೆ ಬಿದ್ದ ಚಿರತೆ ರಕ್ಷಣೆ