ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಳಗಾವಿ(Belagavi) : ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಲಾರಿಯೊಂದಕ್ಕೆ ಬೆಂಕಿ‌ (Lorry Fire) ಹಚ್ಚಿದ ಘಟನೆ ನಡೆದಿದೆ.

ಬೆಳಗಾವಿ(Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಿಂದ ಹೈದರಾಬಾದ್ ಗೆ ಸೋಮವಾರ ರಾತ್ರಿ  ಗೋಮಾಂಸ ಸಾಗಿಸುತ್ತಿರುವ ಮಾಹಿತಿ ಪಡೆದ ಸಾರ್ವಜನಿಕರು ಐನಾಪುರ ಗ್ರಾಮದ ಉಗಾರ ರಸ್ತೆಯ ಶ್ರೀ ಸಿದ್ದೇಶ್ವರ ಗುಡಿ ಹತ್ತಿರ  ಲಾರಿ ತಡೆ ಹಿಡಿದು ಪರಿಶೀಲನೆ  ನಡೆಸಿದ್ದಾರೆ. ಲಾರಿಯಲ್ಲಿ ಸಾಕಷ್ಟು  ಪ್ರಮಾಣದಲ್ಲಿ ಗೋಮಾಂಸ ಇರುವುದು ಗೊತ್ತಾಗಿದೆ.

ರೊಚ್ಚಿಗೆದ್ದ ಸಾರ್ವಜನಿಕರು ಲಾರಿಗೆ ಬೆಂಕಿ(Lorry Fire) ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಲಾರಿಯಲ್ಲಿ ಸುಮಾರು ಐದು ಟನ್ ಗೂ ಹೆಚ್ಚು ಗೋಮಾಂಸ ಇತ್ತು ಎಂದು ಹೇಳಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಲಾರಿ ಅಗ್ನಿಗಾಹುತಿಯಾಗಿದೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳ(Fire Brigade) ಸಿಬ್ಬಂದಿಗಳು   ಬೆಂಕಿ ನಂದಿಸಿದ್ದಾರೆ. ಕಾಗವಾಡ ಪೊಲೀಸ್ ಠಾಣಾ(Kagawada Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ಧರ್ಮಸ್ಥಳ ಪ್ರಕರಣ.‌ಮಹೇಶ ಶೆಟ್ಟಿ ತಿಮರೋಡಿ ಅಂತೂ ಗಡಿಪಾರು.

ಶಿರಸಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ. ಯುವತಿ ದುರ್ಮರಣ

ಕಾರವಾರದಲ್ಲಿ ಹೂ ಹಣ್ಣು ವ್ಯಾಪಾರಿಗಳ ಜಗಳ. ಮಹಿಳೆಯರ ಮಾರಾಮಾರಿ.

ಮುರ್ಡೇಶ್ವರ ಪ್ರವಾಸಕ್ಕೆ ಬಂದು ಸಮುದ್ರದ ಅಲೆಗೆ ಸಿಲುಕಿದ ಕುಟುಂಬ. ಬಾಲಕ ನೀರುಪಾಲು.

https://www.instagram.com/reel/DO7zxWVgJkN/?igsh=YzljYTk1ODg3Zg==