ಭಟ್ಕಳ(BHATKAL) : ಬಸ್ ತಪ್ಪಿಸುವ ಭರದಲ್ಲಿ ಕ್ಯಾಶು ಆಯಿಲ್ ತುಂಬಿದ ಟ್ಯಾಂಕರ್  (Tanker) ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ತಾಲೂಕಿನ  ಮೂಢಭಟ್ಕಳ ಬೈಪಾಸ್ (Mudabhatkal bipass) ಸಮೀಪ ನಡೆದಿದೆ.

ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.  ರಾಜಸ್ಥಾನ ಮೂಲದ ಮದನ ಲಾರಿ ಚಾಲಕ ಎಂದು ತಿಳಿದು ಬಂದಿದೆ. ಮಂಗಳೂರಿನಿಂದ ಕ್ಯಾಶು ಆಯಿಲ್(Cashew oil) ತುಂಬಿಕೊಂಡು  ಹರಿಯಾಣ (Haryan)ಕಡೆಗೆ ಟ್ಯಾಂಕರ್ ಹೋಗುತ್ತಿತ್ತು.  ರಾ. ಹೆದ್ದಾರಿ 66  ಪುರವರ್ಗ(Nh 66 puravarga) ಕಡೆಯಿಂದ ಮೂಢಭಟ್ಕಳ ಬೈಪಾಸ್ ಕಡೆಗೆ ಬರುತ್ತಿದ್ದ ವೇಳೆಗೆ ಮುಂಬದಿಯಲ್ಲಿ ಬಸ್ ಬಂದಿದೆ. ಚಾಲಕ ರಾಷ್ಟ್ರೀಯ ಹೆದ್ದಾರಿಗೆ ಹಾಕಲಾಗಿದ್ದ ಹಂಪ್ ನೋಡಿ ತಕ್ಷಣ ಬ್ರೇಕ್ ಹಾಕಿದ್ದಾನೆ. ಇದನ್ನು ಗಮನಿಸಿದ  ಟ್ಯಾಂಕರ್  ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಬಸ್ ತಪ್ಪಿಸಲು ಹೋಗಿ ತನ್ನ ಎಡ ಭಾಗಕ್ಕೆ ತೆಗೆದುಕೊಂಡಿದ್ದಾನೆ. ಆಗ ನಿಯಂತ್ರಣ ತಪ್ಪಿ ಅಲ್ಲೇ ಇದ್ದ  ಪ್ರಪಾತಕ್ಕೆ ಟ್ಯಾಂಕರ್ ಬಿದ್ದಿದ್ದೆ.

ಘಟನೆಯಲ್ಲಿ ಕ್ಯಾಶು ಆಯಿಲ್ ತುಂಬಿದ ಟ್ಯಾಂಕರ್  ರಂದ್ರವಾಗಿ ಸೋರಿಕೆಯಾಗಿದೆ. ಈ ಅಪಘಾತದಲ್ಲಿ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂತರ  ಅಗ್ನಿಶಾಮಕ ದಳದ ಸಿಬ್ಬಂದಿಗಳು  ಪಲ್ಟಿಯಾಗಿದ್ದ  ಟ್ಯಾಂಕರನ ಡೀಸೆಲ್ ತೆಗದು ಯಾವುದೇ ಅನಾಹುತ ನಡೆಯತಂತೆ ಮುಂಜಾಗ್ರತೆ ವಹಿಸಿದ್ದಾರೆ.

ಅಪಘಾತಕ್ಕೆ ಐ.ಆರ್.ಬಿ(IRB) ಕಂಪನಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ : ಶಿರೂರು ಪ್ರಕರಣ. ಶಿರೂರಿನ ಕೃತಿಕಾಗೆ ನೇಮಕಾತಿ ಪತ್ರ ನೀಡಿದ ಕುಮಾರಸ್ವಾಮಿ

ಪ್ರವಾಸಿಗರ ಆಕರ್ಷಣೆಗೆ ಮುರ್ಡೇಶ್ವರ, ಮಂಗಳೂರಿನಲ್ಲಿ ಪ್ರವಾಸಿ ಬಂದರು

ಬೆಂಗಳೂರಿನಿಂದ ಕಾರವಾರಕ್ಕೆ ದೀಪಾವಳಿ ವಿಶೇಷ ರೈಲು