ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡು(Mundgod) : ಯುಟ್ಯೂಬರ್ ಮುಕಳೆಪ್ಪ(Youtuber Mukaleppa) ಅಂತರ್ಜಾತಿ ವಿವಾಹಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣದ ಹಿನ್ನಲೆಯಲ್ಲಿ ಇಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್(Pramod Mutalik) ಉತ್ತರಕನ್ನಡ ಜಿಲ್ಲೆಯ ಮುಂಡಗೋಡು(Mundgodu) ಪಟ್ಟಣಕ್ಕೆ ಭೇಟಿ ನೀಡಿದರು
ಲವ್ ಜಿಹಾದ್(Love Jihad) ಆರೋಪದ ಹಿನ್ನಲೆಯಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರ ನೇತೃತ್ವದಲ್ಲಿ ಶಿವಾಜಿ ವೃತ್ತದಲ್ಲಿ(Shivaji Circle) ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್, ಮುಕಳೆಪ್ಪ ಎಂಬಾತ ಲವ್ ಹೆಸರಿನಲ್ಲಿ ಹಿಂದೂ ಹುಡುಗಿಯನ್ನು ಬಲವಂತವಾಗಿ ತನ್ನ ಬಲೆಗೆ ಸೆಳೆದಿದ್ದಾನೆ. ಇದು ಲವ್ ಜಿಹಾದ್ ಪ್ರಕರಣ. ನಕಲಿ ದಾಖಲೆಗಳ ಮೂಲಕ ನೋಂದಣಿ ಕಚೇರಿಯಲ್ಲಿ(Register Office) ಕಪಟ ವಿವಾಹವನ್ನು ನೋಂದಾಯಿಸಲಾಗಿದೆ. ಇದು ಒಂದು ಕಾನೂನು ಬಾಹಿರ ಕೃತ್ಯ. ಇಂತಹ ಘಟನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಜಿಹಾದಿಗಳಿಂದ ನಮ್ಮ ಹಿಂದೂ ಸಹೋದರಿಯರನ್ನು ರಕ್ಷಿಸುವ ಸಮಯ ಬಂದಿದೆ” ಎಂದು ಹೇಳಿದರು.
“ದಿನೇ ದಿನ ಲವ್ ಜಿಹಾದ್(Love jihad) ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಜನರಲ್ಲಿ ಭಯ ಮತ್ತು ಆತಂಕವನ್ನುಂಟು ಮಾಡುತ್ತಿದೆ. ಸರ್ಕಾರ ಹಾಗೂ ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಶ್ರೀ ರಾಮ ಸೇನೆಯ ಕಾರ್ಯಕರ್ತರು ಧರ್ಮಾಂಧರ ಹಾಗೂ ನಕಲಿ ದಾಖಲೆಗಳ ಮೂಲಕ ನಡೆಯುತ್ತಿರುವ ವಿವಾಹಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕೆಂದು ಘೋಷಣೆ ಕೂಗಿದರು.
ಮುಂಡಗೋಡಿನಲ್ಲಿ ಕನ್ನಡ ಯೂಟ್ಯೂಬರ್ ಮುಕಳೆಪ್ಪ(Youtuber Mukakeppa) (ಅಸಲಿ ಹೆಸರು ಅಲ್ಲಾ ಬಕ್ಷ್) ಎಂಬುವವರು ಹಿಂದೂ ಯುವತಿ ಗಾಯತ್ರಿ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗಳು ಮುಂಡಗೋಡು ನಿವಾಸಿಗಳಲ್ಲ. ಗಾಯತ್ರಿಯ ಪಾಲಕರು ಈ ವಿವಾಹದ ವಿರೋಧ ವ್ಯಕ್ತಪಡಿಸಿ ಇದನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದರು. ಆದರೆ ಗಾಯತ್ರಿ ತನ್ನಿಂದಲೇ ವಿವಾಹವಾಗಿದ್ದೇನೆ ಎಂದು ಸ್ಪಷ್ಟಪಡಿಸಿ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮುಕಳೆಪ್ಪ ಹಾಗೂ ಮುಂಡಗೋಡ ಉಪನೋಂದಣಾಧಿಕಾರಿಗಳ(Mundgod Sub register) ವಿರುದ್ಧ ನಕಲಿ ದಾಖಲೆ ಬಳಸಿ ವಿವಾಹ ನೋಂದಾಯಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆ ಹಿನ್ನಲೆಯಲ್ಲಿ ಇಂದು ಮುಂಡಗೋಡು ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದನ್ನು ಓದಿ : ಅಕ್ಟೋಬರ್ 2ರಿಂದ 5ರವರೆಗೆ ಕಾರವಾರದಲ್ಲಿ ಕರ್ನಾಟಕ ಪ್ರಾಂತೀಯ ಯುವ ಸಮ್ಮೇಳನ ಯುವ ಜನೋತ್ಸವ.
ಸಚಿವರ ಆಪ್ತ ಸಹಾಯಕ ಎಂದು ಜಿಲ್ಲಾದಿಕಾರಿಗೆ ವಂಚನೆ. ಕಾರವಾರ ವಿದ್ಯಾರ್ಥಿ ಬಂಧನ
ಸರಸ್ವತಿ ಸಮ್ಮಾನ್, ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ.