ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಕಳೆದ ಕೆಲ ವರ್ಷಗಳಿಂದ ಪುರಾಣ ಪ್ರಸಿದ್ಧ ಮುಡೇಶ್ವರ ಪ್ರವಾಸೋದ್ಯಮದಲ್ಲಿ (Murdeshwar Temple) ಗಣನೀಯ ಅಭಿವೃದ್ಧಿ ಕಾಣುತ್ತಿದೆ. ಆದರೆ ಪ್ರಕೃತಿ ವಿಕೋಪದಿಂದಾಗಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದೆ. ಹೀಗಾಗಿ ಶ್ರೀ ಮುರುಡೇಶ್ವರನಲ್ಲಿ ನಿವೇದಿಸಿ ಆಶೀರ್ವಾದವನ್ನು ಪಡೆಯಲು ಅಕ್ಟೋಬರ್ 13 ಸೋಮವಾರದಂದು ವಿಶಿಷ್ಟ ಸಮುದ್ರ ಆರತಿ ಪೂಜೆ(Samudra Arati Pooja) ನಡೆಸಲು ತೀರ್ಮಾನಿಸಲಾಗಿದೆ.
ಈ ಸಂಬಂಧ ಮುರ್ಡೇಶ್ವರ ದೇವಸ್ಥಾನದ(Murdeshwar Temple) ಆರ್ ಎನ್ ಎಸ್ ಮಿನಿ ಸಭಾಭವನದಲ್ಲಿ ನಾಗರಿಕರ ಸಭೆ ನಡೆಸಲಾಯಿತು. ಮುರುಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಜಯರಾಮ ಅಡಿಗಳ ಹಾಗೂ ಶಿವರಾಮ ಅಡಿಗಳ ನೇತೃತ್ವದಲ್ಲಿ ಚರ್ಚಿಸಲಾಯಿತು.
ಸಮುದ್ರವನ್ನೇ ನಂಬಿ ವ್ಯಾಪಾರ ವ್ಯವಹಾರಗಳನ್ನು ನಡೆಸುವ ಹಾಗು ತಮ್ಮದೇ ಉದ್ಯಮಗಳನ್ನು ಸ್ಥಾಪಿಸಿ ಬದುಕುತ್ತಿರುವ ಕುಟುಂಬಗಳು ಹಲವಾರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಸೋಮವಾರ ಅಕ್ಟೋಬರ್ 13ರಂದು ಮ್ಹಾತೋಬಾರ ಶ್ರೀ ಮುರ್ಡೇಶ್ವರ ದೇವಸ್ಥಾನ ಹಾಗೂ ಸೀಮಾ ಸಮಿತಿ* ಯ ವತಿಯಿಂದ ವಿವಿಧ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಮುರ್ಡೇಶ್ವರ ದೇವರಿಗೆ ಶತರುದ್ರ ಅನುಷ್ಠಾನ , ಗಂಗಾಹೋಮ,10 ಗಂಟೆಗೆ ದೇವರಿಗೆ ಊರ ಭಕ್ತಾದಿಗಳಿಂದ ದೋಷ ಪರಿಹಾರಕ್ಕಾಗಿ ಮುಷ್ಠಿ ನಾಣ್ಯ ಸಮರ್ಪಣೆ ಕಾರ್ಯಕ್ರಮ, ಸಾಯಂಕಾಲ 7 ಗಂಟೆಗೆ ದೇವಸ್ಥಾನದಿಂದ ತೀರ್ಥದ ಕಳಸವನ್ನು ಮೆರವಣಿಗೆ ಮೂಲಕ ಸಮುದ್ರ ತೀರಕ್ಕೆ ಕೊಂಡು ಹೋಗುವುದು , ಭಕ್ತಾದಿಗಳಿಂದ ಸಮುದ್ರಕ್ಕೆ ಮುಷ್ಟಿ ನವದಾನ್ಯ ನಾಣ್ಯ ಸಮರ್ಪಣೆ , ಅಷ್ಟವದನ ಸೇವೆ (ವೇದ ಮಂತ್ರ, ವಾದ್ಯ ಸಂಗೀತ, ನಾಟ್ಯ) ಶಿವ ಮತ್ತು ರಾಮ ನಾಮ ಸ್ಮರಣೆ, ಪೂಜಾಕಾರ್ಯ ನಂತರ ಸಾಂಪ್ರದಾಯಿಕ ಸಮುದ್ರ ಆರತಿ(Samudra Arati) ವಿಶಿಷ್ಟ ಕಾರ್ಯಕ್ರಮ ಜರುಗಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಭೆಯಲ್ಲಿ ಮುರುಡೇಶ್ವರ ಸಮಸ್ತ ನಾಗರಿಕರು, ಸಾರ್ವಜನಿಕ ಶ್ರೀ ಸಿದ್ಧಿ ವಿನಾಯಕ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು, ಮಾವಳ್ಳಿ 1 ಗ್ರಾಮ ಪಂಚಾಯತ್ ಅಧ್ಯಕ್ಷೆ ನಯನಾ ನಾಯ್ಕ. ಶ್ರೀ ಕಂದುಕಗಿರಿ ವಸತಿಗೃಹ ನೌಕರರ ಹಾಗೂ ಮಾಲೀಕರ ಸಂಘ, ಕಂದುಕಗಿರಿ ತಳ್ಳುಗಾಡಿ ಸಂಘ, ಮುರುಡೇಶ್ವರ ಬೀಚ್ ತಳ್ಳುಗಾಡಿ ಅಂಗಡೀಕಾರರ ಕ್ಷೇಮಾಭಿವೃದ್ಧಿ ಸಂಘ, ಮುಡೇಶ್ವರ ವಸತಿಗೃಹ ಮಾಲೀಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನು ಓದಿ : ಅಕ್ಕಿ ಜೊತೆ ದಿನಸಿ ವಸ್ತುಗಳ ಇಂದಿರಾ ಆಹಾರ ಕಿಟ್ ನೀಡಲು ಸರ್ಕಾರದ ತೀರ್ಮಾನ.
ಅಲೆಗಳ ಅಬ್ಬರಕ್ಕೆ ಮುಳುಗಿದ ಬೋಟ್. ಬಂದರು ಸಮೀಪವೇ ಘಟನೆ
ಭಟ್ಕಳ ಮೂಲದ ಕುಮಟಾ ಪುರಸಭೆ ಕಂದಾಯ ನಿರೀಕ್ಷಕ ಬೆಳಗಾವಿಯಲ್ಲಿ ಪತ್ತೆ. ದೌಡಾಯಿಸಿದ ಪೊಲೀಸರು.
ಸ್ನೇಹಿತರ ಜೊತೆ ಬರ್ತ್ ಡೇ ಪಾರ್ಟಿಗೆ ಹೋಗಿದ್ದ ಯುವಕ *ವು.*
ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದ ಕಾಂತಾರ 1. ಪ್ರಾದೇಶಿಕ ಸಿನೆಮಾ ಸಾರ್ವತ್ರಿಕವಾಗಿದ್ದಕ್ಕೆ ರಿಷಬ್ ಶೆಟ್ಟಿ ಹರ್ಷ.