ಕಾರವಾರ(Karwar) : ತಾಲೂಕಿನ ಗಡಿ ಭಾಗದ ಭಕ್ತರ ಆರಾಧ್ಯ ದೇವ ಮಾಜಾಳಿಯ (Majali) ಶ್ರೀ ರಾಮನಾಥ ದೇವರ ಜಾತ್ರೆ(Ramanatha Deva Fair) ವಿಜೃಂಭಣೆಯಿಂದ ಜರುಗಿತು. ಸೋಮವಾರ ಮುಂಜಾನೆ ಮತ್ತು ಸಂಜೆ ಇಲ್ಲಿ ವಾಫರ್(Wafar) ಹಾರಿ ಬಿಡಲಾಯಿತು.

ರಾಮನಾಥ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ರಾಮನಾಥ ದೇವರ ಮೂರ್ತಿಯನ್ನು ಸಾತೇರಿ ದೇವಿ ದೇವಸ್ಥಾನಕ್ಕೆ(Sateri Devi Temple) ತರಲಾಯಿತು.  ಬೆಳಿಗ್ಗೆ ದೇವರ ಮೂರ್ತಿಯನ್ನ ರಥದಲ್ಲಿ ಕೂರಿಸಿ ತರಲಾಯಿತು.  ಕುಳಾವಿಗಳು ತಮ್ಮ ತಮ್ಮ ಮನೆಯ ಮುಂಭಾಗದಲ್ಲಿ  ಕಟ್ಟಿರುವ ತೋರಣಗಳ ಬಳಿ ತೆರಳಿ ಪಲ್ಲಕ್ಕಿಗೆ ಜನರು ಆರತಿ ಬೆಳಗಿ, ಹೂವು ಹಣ್ಣು ನೀಡಿ ಪೂಜೆ ಸಲ್ಲಿಸಿದರು.

ಬೆಳಿಗ್ಗೆ ಇಲ್ಲಿನ ಭೂಮಿ ಪುರುಷ ದೇವಾಲಯ(Bhoomi purush Temple) ಸಮೀಪ ಮತ್ತು ಸಂಜೆ ರಾಮನಾಥ ದೇವಾಲಯದ(Ramanath Temple) ಬಳಿ ಬಿಸಿಗಾಳಿ ತುಂಬಿದ ಬಲೂನ್(Baloon) ಅನ್ನು ಆಗಸಕ್ಕೆ ಹಾರಿಸಿ ಬಿಡಲಾಯಿತು.

ಈ ಬಾರಿಯ ಬಲೂನು ಸುಮಾರು 8 ಅಡಿ ಸುತ್ತಳತೆ ಮತ್ತು 15 ಅಡಿ ಎತ್ತರದ ಬಲೂನ್ ಹಾರಿ ಬಿಡಲಾಯಿತು. ಬಲೂನ್ ಜಾತ್ರೆಯೆಂದೇ(Baloon Jaatre) ಪ್ರಸಿದ್ಧಿ ಪಡೆದಿರುವ ಈ ಜಾತ್ರೆಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಬಲೂನ್ ಹಾರುವಾಗ ಪಾರ್ವತಿ ಪತೆ ಹರಹರ ಮಹಾದೇವ ಕೂಗುತ್ತ, ಚಪ್ಪಾಳೆ ಹಾಕುವ ಮೂಲಕ ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಗ್ರಾಮದಲ್ಲಿನ ರೋಗ ರುಜಿನಗಳು, ಕಷ್ಟ, ತೊಂದರೆ, ವೈ ಮನಸ್ಸು ಇತ್ಯಾದಿ ಸಂಕಷ್ಟಗಳು ದೂರವಾಗಲಿ  ಎನ್ನುವ ಉದ್ದೇಶದಿಂದ ಜಾತ್ರೆಯ ಸಂದರ್ಭದಲ್ಲಿ ಈ ರೀತಿ ಬಲೂನನ್ನು ಅನ್ನು ಹಾರಿ ಬಿಡಲಾಗುತ್ತದೆ. ಈ ವೇಳೆ ಗ್ರಾಮದ ಭಕ್ತರು ಚಾಚು ತಪ್ಪದೆ ಪಾಲ್ಗೊಳ್ಳುತ್ತಾರೆ. ಊರ ಹೊರ ಇದ್ದವರು ಸಹ ಜಾತ್ರೆ ಸಂದರ್ಭದಲ್ಲಿ ಆಗಮಿಸುತ್ತಾರೆ.

ಇದನ್ನು ಓದಿ : ರುದ್ರೇಶ್ ಪ್ರಕರಣ. ಅನಾಮಧೇಯ ಪತ್ರ. ತಿರುವು ಪಡೆಯೋ ಸಾಧ್ಯತೆ

ಬಾಲವಿಕಾಸ ಮಕ್ಕಳಿಂದ ಶ್ರೀ ಸಾಯಿ ಲಕ್ಷಾರ್ಚನೆ

ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರ ಸಾವು