ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಮೋಸದಿಂದ ಸುಳ್ಳು ಕಾಗದ ಪತ್ರ ಸಲ್ಲಿಸಿ ಯಾವುದೇ ಕಾನೂನು ಪಾಲಿಸದೆ ಆದ ಹಿಂದು ಯುವತಿಯ ಮದುವೆ ನೋಂದಾವಣೆ ರದ್ದಾಗಬೇಕು ಮತ್ತು  ನೋಂದಣಿ ಅಧಿಕಾರಿಯನ್ನು ಅಮಾನತ್ತು ಮಾಡಬೇಕೆಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್(Pramod Mutalik) ಆಗ್ರಹಿಸಿದ್ದಾರೆ.

ಸೋಮವಾರ  ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು. ಭಾರತದಲ್ಲಿ ಮಹಿಳೆಗೆ ವಿಶಿಷ್ಟ ಸ್ಥಾನ ಇದೆ. ಸ್ತ್ರೀಯನ್ನು ಗೌರವದಿಂದ, ಪೂಜ್ಯತೆಯಿಂದ ನೋಡಲಾಗುತ್ತದೆ.‌ ಅವರ ಶಿಕ್ಷಣಕ್ಕೆ, ಸುರಕ್ಷತೆಗಾಗಿ ಸಂವಿಧಾನದ ಮೂಲಕ ಅನೇಕ ಕಾನೂನು ರಚಿಸಲಾಗಿದೆ. ಇತ್ತೀಚಿಗೆ ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದ ಸ್ತ್ರೀ ಯನ್ನು ಭೋಗದ ವಸ್ತು ಎಂದು ಬಿಂಬಿಸಲಾಗುತ್ತಿದ್ದು ಕಾರಣ ಮಹಿಳೆಯದ ಅಪಹರಣ, ಅತ್ಯಾಚಾರ ಕೊಲೆಗಳು ವಿಪರೀತ ನಡೆಯುತಿರುವುದು ಆಘಾತಕಾರಿಯಾಗಿದೆ. ಮದುವೆ ಎಂಬುದು ಪವಿತ್ರ ಭಂದನವಾಗಿದ್ದು, ಶಾಸ್ತ್ರ ಬದ್ಧ ಹಾಗೂ ಸಂಸ್ಕಾರಯುತ ಸಂಪ್ರದಾಯವಾಗಿದೆ, ವಿವಾಹಕ್ಕೆ ಕಾನೂನು ಮೂಲಕ ಸುರಕ್ಷತೆಯನ್ನು ಒದಗಿಸಲಾಗಿದೆ ಎಂದು ಉಲ್ಲೇಖಿಸಿದ ಅವರು,  ಇತ್ತೀಚೆಗೆ ಮುಂಡಗೋಡ ಉಪ ನೋಂದಣಿ(Mundgod Subregiater) ಕಛೇರಿಯಲ್ಲಿ ಅವ್ಯವಹಾರ, ಕಾನೂನುಬಾಹೀರ ಹಾಗೂ ಬ್ರಷ್ಟಾಚಾರದ(Curraption) ಮೂಲಕ ವಿವಾಹ ನೋಂದಣಿ ಬೇಕಾಬಿಟ್ಟಿ ಮಾಡಲಾಗುತ್ತಿದೆ. ಕಳೆದ ಮೇ ಮೂರರಂದು ಮುಸ್ಲಿಂ ಹುಡುಗ ಖ್ವಾಜ ಬಂದೇನವಾಜ ಶಿರಹಟ್ಟಿ (ಯುಟೂಬರ್)(Youtuber) ಹಾಗೂ ಹಿಂದೂ ಹುಡುಗಿ ಗಾಯತ್ರಿ ಜಾಲಿಹಾಳ(Gayatri Jaligala) ಮದುವೆ ನೊಂದಣಿ  ಸುಳ್ಳು ಕಾಗದ ಪತ್ರಗಳನ್ನು ಸೃಷ್ಟಿಸಿ ಕಾನೂನು ಗಾಳಿಗೆ ತೂರಿ ನೋಂದಾಯಿಸಿ ಅಪರಾಧವೆಸಗಿದ್ದಾರೆ. ಹೀಗಾಗಿ ಅವರ ಮೇಲೆ ಕ್ರಮವಾಗಬೇಕೆಂದು ಒತ್ತಾಯಿಸಿದರು.

ಮೇ ಮೂರರಂದು ಮಧ್ಯಾಹ್ನ 3:46ಕ್ಕೆ ಬಾಂಡ್ ಪೇಪರ್ ಖರೀದಿಸಿ ಅವತ್ತಿನ ದಿನವೆ ಬಾಡಿಗೆ ಕರಾರು ಮಾಡಿ ಅಂದೇ ಮದುವೆ ನೋಂದಾವಣೆ ಮಾಡಿದ್ದಾರೆ. ಹುಡುಗ ಮತ್ತು ಹುಡುಗಿ ಹುಬ್ಬಳ್ಳಿ(Hubli), ಧಾರವಾಡದ(Dharwad) ನಿವಾಸಿಗಳಾಗಿದ್ದು ಆಧಾರ ಕಾರ್ಡ್(Adhar Card) ಪ್ರಕಾರ ಮದುವೆ ನೋಂದಣೆಯ ನೋಟೀಸ್ ಮುಂಚೆ ಹಾಗೂ ನಂತರ ಕನಿಷ್ಠ ಒಂದು ತಿಂಗಳ ನೋಂದಾವಣೆಯ ಜಿಲ್ಲೆಯಲ್ಲಿ ವಾಸವಾಗಿರಬೇಕು ಎಂಬ ಕಾನೂನಿನ ಉಲ್ಲಂಘನೆಯಾಗಿದೆ. ನೋಂದಾವಣೆಯ ನಂತರ ನೋಟಿಸ್ ಬೋರ್ಡ್‌ ಗೆ(Notice Board) ಮದುವೆಯ ಮಾಹಿತಿಯನ್ನು ಅಂಟಿಸಬೇಕು, ಅಂಟಿಸಿಲ್ಲ.

ಈ ಜಿಲ್ಲೆಯವರಲ್ಲದಿದ್ದರೆ ಇಬ್ಬರು ಖಾಯಂ ವಿಳಾಸದ ಊರಿನ ಕಛೇರಿಗೆ ತಿಳಿಸಬೇಕು. ಹಾಗೂ ನೋಟೀಸ್ ಬೋರ್ಡ್‌ ಗೆ ಆಂಟಿಸಬೇಕು. (ವಿಶೇಷ ವಿವಾಹ ಕಾಯ್ದೆ 1954ರ ಸೆಕ್ಷನ್ 5 ಪ್ರಕಾರ) ಕಾನೂನು ಪಾಲಿಸಿಲ್ಲ.

1954 ರ ಕಾನೂನಿನ ಪ್ರಕಾರ‌ ಮುಸ್ಲಿಂ – ಮುಸ್ಲಿಂನಾಗಿಯೆ ಹಾಗೂ ಹಿಂದೂ-ಹಿಂದೂ ಆಗಿಯೆ ಇರಬೇಕು. ಆದರೆ ಬಾಂಡ್ ನಲ್ಲಿ ನಾವು ಸ್ಪೇಶಲ್ (ಮುಸ್ಲಿಂ) ವಿವಾಹ ಕಾಯ್ದೆ ಅಡಿ ವಿವಾಹ ನೊಂದಣಿ ಬೇಡಿ ಉಪ ನೊಂದಣಾಧಿಕಾರಿಗಳಿಗೆ ಮುಸ್ಲಿಂ ಪ್ರಕಾರ ಮದುವೆಯಾಗಬೇಕೆಂದು ಬರೆದಿದ್ದಾರೆ. ಇದು ಕಾನೂನು ಬಾಹಿರವಾಗಿದೆ ಎಂದು ಮನವಿಯಲ್ಲಿ‌ ತಿಳಿಸಲಾಗಿದೆ.

ಮೋಸದಿಂದ ಸುಳ್ಳು ಕಾಗದ ಪತ್ರ ಸಲ್ಲಿಸಿ ಹಾಗೂ ಕಾನೂನು ಪಾಲಿಸದೆ  ಮಾಡಿದ ಮದುವೆ ನೋಂದಾವಣೆ  ರದ್ದಾಗಬೇಕು.  ಕಾನೂನು ಪಾಲಿಸದೆ ನಿಯಮಗಳನ್ನು ಗಾಳಿಗೆ ತೂರಿದ ನೋಂದಾವಣೆ ಅಧಿಕಾರಿಯನ್ನು ಅಮಾನತ್ತುಗೊಳಿಸಬೇಕು. ಕಾನೂನು ಬಾಹೀರವಾಗಿ ಸಹಕರಿಸಿದ ಇತರ ಸಿಬ್ಬಂದಿಗಳನ್ನು ಅಮಾನತ್ತು ಮಾಡಿ ಕ್ರಮ ತೆಗೆದುಕೊಳ್ಳಬೇಕೆಂದು ಮುತಾಲಿಕ್ ಆಗ್ರಹಿಸಿದ್ದಾರೆ.

ಮುಕಳೆಪ್ಪ(Mukaleppa) ಯಾನೆ ಖ್ವಾಜಾ ಶಿರಹಟ್ಟಿ ಪ್ರಕರಣದಲ್ಲಿ ತಪ್ಪು ಮಾಡಿದ ಎಲ್ಲರನ್ನು ತಕ್ಷಣವಾಗಿ ಬಂಧಿಸಬೇಕು, ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು  ಶ್ರೀರಾಮ ಸೇನೆಯ(Srirama Sene) ರಾಷ್ಟ್ರೀಯ ಅಧ್ಯಕ್ಷ  ಪ್ರಮೋದ ಮುತಾಲಿಕ್(Pramod Mutalik) ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಗಾಯತ್ರಿ ಅವರ ತಾಯಿ ಶಿವಕ್ಕ ಜಾಲಿಹಾಳ, ಶ್ರೀರಾಮ ಸೇನಾ ಉತ್ತರ ಪ್ರಾಂತದ ಉಪಾಧ್ಯಕ್ಷ ಜಯಂತ ನಾಯ್ಕ, ಶ್ರೀರಾಮ ಸೇನಾ ಜಿಲ್ಲಾ ಪ್ರಮುಖ‌ರಾದ  ಸಂತೋಷ ನಾಯ್ಕ, ಸಂದೀಪ ನಾಯ್ಕ , ಶ್ರೀರಾಮ ಸೇನಾ ಮುಂಡಗೋಡ ತಾಲೂಕ ಅಧ್ಯಕ್ಷ ಮಂಜುನಾಥ ಕೆ. ಜಿ. ಸೇರಿದಂತೆ ಇತರರು ಇದ್ದರು.

ಇದನ್ನು ಓದಿ : ಎಣ್ಣೆ ಸಾಗಿಸುತ್ತಿದ್ದ ಲಾರಿ ಪಲ್ಟಿ.  ನೂರಾರು ಲೀಟರ್ ಅಡುಗೆ ಎಣ್ಣೆ ರಸ್ತೆ ಪಾಲು