ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ನಗರಸಭೆಯಲ್ಲಿ ಕಳೆದ 12 ವರ್ಷಗಳಿಂದ ಹಿರಿಯ ಆರೋಗ್ಯ ನಿರೀಕ್ಷಕರಾಗಿ(Health Inspector) ಕರ್ತವ್ಯ ನಿರ್ವಹಿಸಿದ್ದ ಮಹಮದ್ ಯಾಕೂಬ್ ಶೇಖ್ ಅವರಿಗೆ ಬಡ್ತಿ ಲಭಿಸಿದೆ. ಈಗ ಅವರು ಸಿದ್ದಾಪುರ ಪಟ್ಟಣ ಪಂಚಾಯತ್ ನಲ್ಲಿ(Siddapura Pattana Panchayat) ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಹೊನ್ನಾವರದ ಪ್ರಭಾತ ನಗರ(Honnavar Prabhatnagar) ಮೂಲದ ಯಾಕೂಬ್ ಶೇಖ್  ಅವರು ಒಟ್ಟು 27 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ‌.  ದ್ವೀತಿಯ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿದ್ದ ಅವರು 13 ವರ್ಷಗಳ ಕಾಲ ಭಟ್ಕಳ ಪುರಸಭೆಯಲ್ಲಿ(Bhatkal TMC)  ಕಿರಿಯ ಆರೋಗ್ಯ ನಿರೀಕ್ಷಕರಾಗಿದ್ದರು. ಬಳಿಕ ಕುಮಟಾ ಪುರಸಭೆಯಲ್ಲಿ(Kumta TMC) ಹಿರಿಯ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ನಂತರ 2013ರಿಂದ ಈವರೆಗೆ ಕಾರವಾರ ನಗರಸಭೆಯಲ್ಲಿ(Karwar CMC) ಹಿರಿಯ ಆರೋಗ್ಯ ನಿರೀಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಇದೀಗ ಬಡ್ತಿ ಪಡೆದು ಪುರಸಭೆಯ ಮುಖ್ಯಾಧಿಕಾರಿ ಆಗಿ ಸಿದ್ದಾಪುರದಲ್ಲಿ  ಅಧಿಕಾರ ಸ್ವೀಕರಿಸಿದ್ದಾರೆ. ಅವರ ಸೇವೆ ಸಾರ್ಥಕವಾಗಲಿ ಎಂದು ನಾಗರಿಕರು ಆಶಿಸಿದ್ದಾರೆ.

ಇದನ್ನು ಓದಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿಗರ ವಾಹನ ಪಲ್ಟಿ ಚಾಲಕ ಗಂಭೀರ.

ಬೇಲೇಕೇರಿ ಅಕ್ರಮ ಅದಿರು ಕೇಸ್. ಇಡಿ ಅಧಿಕಾರಿಗಳ ಮುಂದುವರಿದ ದಾಳಿ.