ಭಟ್ಕಳ(BHATKAL) : ಖಾಸಗಿ ಕ್ಲಿನಿಕ್ ಗಳ(Private Clinic) ಮೇಲೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಭಟ್ಕಳದಲ್ಲಿ ವರದಿಯಾಗಿದೆ. ರಾಜ್ಯ ಕೆ.ಪಿ.ಎಂ.ಈ. ಕಾಯ್ದೆಯ(KPME) ಜಿಲ್ಲಾ ನೋಡಲ್ ಅಧಿಕಾರಿ ನೇತೃತ್ವದ ತಂಡದಿಂದ ಕ್ಲಿನಿಕ್ ಜಪ್ತಿ (Clinic Seaz) ಮಾಡಲಾಗಿದ್ದು ಎರಡು ಖಾಸಗಿ ಕ್ಲಿನಿಕ್ ವೈದ್ಯರಿಗೆ ನೋಟಿಸ್ ನೀಡಲಾಗಿದೆ.
ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆ
(ಕೆ.ಪಿ.ಎಂ.ಈ. ) ನೋಡಲ್ ಅಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ್ ನೇತೃತ್ವದ ತಂಡವು ಭಟ್ಕಳ (BHATKAL) ಖಾಸಗಿ ಕ್ಲಿನಿಕ್ ವೈದ್ಯರುಗಳ ಕುರಿತಾಗಿ ಗುಪ್ತ ಕಾರ್ಯಾಚರಣೆಗಿಳಿದಿದೆ. ಬುಧವಾರ ನೇರವಾಗಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಯಾವುದೇ ಮಾಹಿತಿ ನೀಡದೇ ಭಟ್ಕಳ ತಾಲೂಕಾ ಆರೋಗ್ಯಾಧಿಕಾರಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಹಾಗೂ ಅವರ ತಂಡದೊಂದಿಗೆ ಹಲವು ಕ್ಲಿನಿಕ್ ಪರಿಶೀಲನೆ ನಡೆಸಿದೆ.
.
ಪೇಟೆ ಹನುಮಂತ ದೇವಸ್ಥಾನದ ಸಮೀಪದ ಡಾ ವಿವೇಕ್ ಭಟ್ ಅವರ ರಂಜನ್ ಕ್ಲಿನಿಕ್ ಮೇಲೆ ದಾಳಿ ನಡೆಸಿ ಅವರ ಬಳಿಯಿದ್ದ ದಾಖಲೆಗಳ ಪರಿಶೀಲನೆ ನಡೆಸಿತು. ಈ ವೇಳೆ ಯಾವುದೇ ದಾಖಲೆ ಮತ್ತು ಸಂಬಂಧಿತ ಡಿಗ್ರಿಯು ಇಲ್ಲದ ಕಾರಣ ಅವರ ಕ್ಲಿನಿಕನ್ನು ಸ್ಥಳದಲ್ಲೇ ಜಪ್ತಿ ಮಾಡಿದರು.
ಸರ್ಪನಕಟ್ಟೆಯಲ್ಲಿನ ಶ್ರೀ ದುರ್ಗಾ ಕ್ಲಿನಿಕ್ ಗೆ ತೆರಳಿದ ಅಧಿಕಾರಿಗಳು ಅವರಿಂದ ದಾಖಲೆ ಪರಿಶೀಲನೆ ನಡೆಸಿದ್ದು, ದಾಖಲೆ ಸರಿಯಿದ್ದವು. ಹಾಗೂ ಕ್ಲಿನಿಕನಲ್ಲಿನ ಬಯೋ ಮೆಡಿಕಲ್ ವೆಸ್ಟ್ ಸರಿಯಿಲ್ಲದ ಹಿನ್ನೆಲೆ ಅವರಿಗೆ ನೋಟಿಸ್ ನೀಡಿ ಸೂಚನೆ ನೀಡಲಾಗಿದೆ.
ತೆಂಗಿನಗುಂಡಿ ಹೆಬಳೆ ಹೆರ್ತಾರ್ ಕ್ರಾಸ್ ಗುರುರಾಜ್ ಕ್ಲಿನಿಕ್ ಡಾ. ವಿನಯ ಹೆಬ್ಬಾರ ಕ್ಲಿನಿಕ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅವರು ಹೋಮಿಯೋಪತಿ ವೈದ್ಯರಾಗಿದ್ದು ಸಂಬಂದಿತ ದಾಖಲೆಗಳಿದ್ದು, ಆದರೆ ಅಲೋಪತಿ ಔಷಧಿಯನ್ನು ನೀಡುತ್ತಿರುವುದು ಗೊತ್ತಾಗಿದೆ. ಹೀಗಾಗಿ ನೋಟಿಸ್ ನೀಡಿದ್ದಾರೆ.
ಆಜಾದ್ ನಗರದಲ್ಲಿನ ನೌಮನ್ ಕ್ಲಿನಿಕ್ ಮೇಲೂ ದಾಳಿ ನಡೆಸಲಾಗಿದ್ದು ಈ ವೇಳೆ ಕ್ಲಿನಿಕ್ ವೈದ್ಯರು ಹೋಮಿಯೋಪತಿ ವೈದ್ಯರಾಗಿದ್ದಾರೆ. ಸಂಬಂದಿತ ದಾಖಲೆಗಳು ಸಮರ್ಪಕವಾಗಿದ್ದು, ಇವರು ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯಿದೆಯಡಿಯಲ್ಲಿ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದು ಅವರಿಗೆ ಪರವಾನಿಗೆ ಪಡೆದು ಕ್ಲಿನಿಕ್ ನಡೆಸುವಂತೆ ಸೂಚನೆ ನೀಡಲಾಯಿತು.
ಕಾರ್ಯಾಚರಣೆಯಲ್ಲಿ ನೋಡಲ್ ಅಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ್, ಭಟ್ಕಳ ತಾಲೂಕಾ ಆರೋಗ್ಯಾಧಿಕಾರಿ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ, ಆಸ್ಪತ್ರೆಯ ಸಿಬ್ಬಂದಿ ವೆಂಕಟೇಶ ನಾಯ್ಕ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿದ್ದರು.
ಇದನ್ನು ಓದಿ : ಜನವರಿ 14, 15ರಂದು ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಮಾರಿಕಾಂಬಾ ಜಾತ್ರೆ
ಕಾರವಾರದಲ್ಲಿ ಮೂರು ವಾಹನಗಳ ನಡುವೆ ಅಪಘಾತ