ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ನಕಲಿ ಫೇಸ್‌ಬುಕ್(Fake Facebook) ಖಾತೆಗಳನ್ನು ಬಳಸಿ ಸಾರ್ವಜನಿಕರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ(Minister Mankal Vaidya) ವಿರುದ್ಧ ಸುಳ್ಳು ಹಾಗೂ ಅವಹೇಳನಕಾರಿ ಪೋಸ್ಟ್‌ಗಳು ಮತ್ತು ವಿಡಿಯೋ ಹಂಚಿದ ಆರೋಪದ ಮೇಲೆ ಮುರ್ಡೇಶ್ವರ ಪೊಲೀಸರು(Murdeshwar Police) ಓರ್ವನನ್ನು ಬಂಧಿಸಿದ್ದಾರೆ.

ಮೇ 29, 2025 ರಂದು ಮಂಜುನಾಥ ನಾಯ್ಕ ಎಂಬಾತ ಠಾಣೆಗೆ ಬಂದು, “ತೇಜು ನಾಯ್ಕ ಹೊನ್ನಾವರ” ಎಂಬ ನಕಲಿ ಖಾತೆಯಿಂದ(Fake Account) ತನ್ನ ಬಗ್ಗೆ ಅಸಭ್ಯ ಶಬ್ದಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿದೆ ಎಂದು ದೂರು ನೀಡಿದ್ದರು. ಇದರ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.

ಇದೇ ರೀತಿಯಲ್ಲಿ, ಜೂನ್ 6, 2025ರಂದು ನಾಗಪ್ಪ ನಾಯ್ಕ ಎಂಬುವವರು ಠಾಣೆಗೆ ಹಾಜರಾಗಿ, “ತೇಜು ನಾಯ್ಕ ಹೊನ್ನಾವರ” ಮತ್ತು “ವಂದನಾ ಪೂಜಾರಿ” ಎಂಬ ನಕಲಿ ಖಾತೆಗಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ(Mankal Vaidya) ವಿರುದ್ಧ 1.29 ನಿಮಿಷಗಳ ಸುಳ್ಳು ಹಾಗೂ ಅವಹೇಳನಕಾರಿ ವಿಡಿಯೋ ಹಂಚಲಾಗಿದ್ದು, ಇದರಿಂದ ಸಚಿವರಿಗೆ ಮುಜುಗರ ಉಂಟಾಗಿದೆ ಎಂದು ದೂರಿದ್ದರು. ಈ ಕುರಿತು ಮತ್ತೊಂದು ಪ್ರಕರಣ ದಾಖಲಾಗಿತ್ತು.

ತನಿಖೆಯ ಬಳಿಕ ಭಟ್ಕಳ ತಾಲೂಕಿನ ಬೈಲೂರು ದೊಡ್ಡಬಲಸೆಯ  ಪುರಂದರ ಮಂಜುನಾಥ ನಾಯ್ಕ(37) ಎಂಬಾತನನ್ನು  ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್‌ಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಮುರ್ಡೇಶ್ವರ ಪೊಲೀಸರು(Murdeshwar Police) ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನು ಓದಿ : ರಾ. ಹೆದ್ದಾರಿಯಲ್ಲಿರುವ ಚೆಕ್ ಪೋಸ್ಟ್ ಜಖಂ. ಘಟನೆ ಹೊಣೆ ಹೊರುವವರಾರು?

ಮುಂದಿನ ಸಿಎಂ ಸತೀಶ ಜಾರಕಿಹೊಳಿ. ನವೆಂಬರ್ ಕ್ರಾಂತಿ ಮೂನ್ಸೂಚನೆ ನೀಡಿದ ಸಿಎಂ ಪುತ್ರ.