ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ತಾಲ್ಲೂಕಿನ ಬಿಣಗಾ(Binga) ಪ್ರದೇಶದಲ್ಲಿ ಬಿರುಗಾಳಿ ಹಾಗೂ ಭಾರೀ ಮಳೆಗೆ ಬೃಹತ್ ಮರವೊಂದು ಬಿದ್ದಿದೆ(Tree falldown). ಪರಿಣಾಮವಾಗಿ ಹಲವು ವಾಹನಗಳು ಜಖಂಗೊಂಡಿದ್ದು, ಆಕಳೊಂದು ಸಾವನ್ನಪ್ಪಿದೆ.
ಇಲ್ಲಿನ ಲಿಟಲ್ ಬಿಣಗಾ ನೇವಿ ಗೇಟ್ ಹೊರಭಾಗದಲ್ಲಿ ಘಟನೆ ನಡೆದಿದೆ. ಎಂದಿನಂತೆ ಮರದ ಕೆಳಭಾಗದಲ್ಲಿ ಹಲವು ಬೈಕ್ ಗಳನ್ನ ನಿಲ್ಲಿಸಲಾಗಿತ್ತು. ಮಳೆಯಿಂದ ಆಶ್ರಯ ಪಡೆಯಲು ಆಕಳೊಂದು(Cow) ನಿಂತಿತ್ತು. ಈ ವೇಳೆ ಮಳೆ ಮತ್ತು ಬಿರುಗಾಳಿಗೆ ಮರ ನಡುವೆ ತುಂಡಾಗಿ ಕೆಳಕ್ಕೆ ಬಿದ್ದಿದೆ. ಅಕಸ್ಮಿಕ ಘಟನೆಯಿಂದ ಸ್ಥಳೀಯರು ಭೀತಿಗೊಳಗಾದರು.
ಮರ ಬಿದ್ದ ಪರಿಣಾಮ ರಸ್ತೆ ಕೆಲ ಕಾಲ ಸಂಚಾರಕ್ಕೂ ಅಡ್ಡಿಯುಂಟಾಯಿತು. ಬಳಿಕ ನೌಕಾ ಸೇನೆಯ ಅಗ್ನಿಶಾಮಕ ದಳದ(Naval Fire Brigade) ಸಿಬ್ಬಂದಿಗಳು, ಪೊಲೀಸರು ಹಾಗೂ ಸ್ಥಳೀಯ ನಿವಾಸಿಗಳು ಒಟ್ಟಾಗಿ ಕಾರ್ಯನಿರ್ವಹಿಸಿ ಬಿದ್ದ ಮರವನ್ನು ತೆರವುಗೊಳಿಸಿದರು.
ನೌಕಾದಳದ ಅಗ್ನಿಶಾಮಕ ಠಾಣಾಧಿಕಾರಿ ಸುಭಾಷ್ ಎಂ ನಾಯ್ಕ, ಚಾಲಕ ಯೊಗೇಶ ದುರ್ಗೇಕರ, ಲೀಎಇಂಗ್ ಪೈರಮನ್ ಗುರುದಾಸ ಪಾಯ್ದೆ, ಸಾಯಿಕಿರಣ ನಾಗೇಕರ, ಮಹೇಶ ನಾಯ್ಕ, ಸಚಿನ್ ನಾಯ್ಕ, ವಿಶಾಂತ ನಾಯ್ಕ ಮರ ತೆರವು ಕಾರ್ಯಾಚರಣೆ ನಡೆಸಿದ್ದರು.
ಸದ್ಯ ಪ್ರದೇಶದಲ್ಲಿ ಮಳೆಗಾಳಿ ಮುಂದುವರಿದಿದ್ದು, ಅಧಿಕಾರಿಗಳು ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಬಿರುಗಾಳಿಯ ತೀವ್ರತೆಯಿಂದಾಗಿ ಇನ್ನೂ ಕೆಲವು ಭಾಗಗಳಲ್ಲಿ ಮರಗಳು ಮುರಿಯುವ ಸಾಧ್ಯತೆ ಇರುವುದರಿಂದ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಓದಿ : ಬಸ್ ಗೆ ಹಿಂಬದಿಯಿಂದ ಬೈಕ್ ಢಿಕ್ಕಿ. 20 ಪ್ರಯಾಣಿಕರ ದುರ್ಮರಣ.
69 ವರ್ಷದ ಸತ್ತ ವ್ಯಕ್ತಿ ಚಿತೆಯಲ್ಲಿ ಎದ್ದ. ವೈದ್ಯಕೀಯ ಲೋಕದಲ್ಲಿ ಮತ್ತೊಂದು ಅಚ್ಚರಿಯ ಘಟನೆ.
ನಕಲಿ ಫೇಸ್ಬುಕ್ ಖಾತೆಯ ಮೂಲಕ ಸಚಿವ ಮಂಕಾಳ ವೈದ್ಯ ವಿರುದ್ದ ಅವಹೇಳನಕಾರಿ ಪೋಸ್ಟ್. ಓರ್ವ ಆರೆಸ್ಟ್.