ಅಂಕೋಲಾ : ಜುಲೈ 16 ರಿಂದ ಅಂಕೋಲಾದ ಶಿರೂರಿನಲ್ಲಿ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ನಾಪತ್ತೆಯಾದವರ ಪತ್ತೆಗಾಗಿ ಶೋಧ ಮುಂದುವರಿಸಲಾಗಿದೆ.
ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ಕಠಿಣವಾದ ಪ್ರಯತ್ನ ಮಾಡುತ್ತಿದೆ. ರಕ್ಷಣ ತಂಡಗಳದ NDRF, SDRF ಸೇರಿ ಆರ್ಮಿ, ನೇವಿಯವರು ಕಾರ್ಯಾಚರಣೆ ನಡೆಸಿದ್ದರು. ಅಲ್ಲದೇ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ನೇತೃತ್ವದಲ್ಲಿ ರೆಡಾರ್ ಮೂಲಕ ನಾಲ್ಕು ಸ್ಥಳಗಳನ್ನ ಗುರುತು ಮಾಡಲಾಗಿದೆ.
ಶನಿವಾರ ಈಶ್ವರ್ ಮಲ್ಪೆ ತಂಡದ 9 ಜನರು ಗಂಗಾವಳಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈಶ್ವರ ಮಲ್ಪೆ, ಬುರ್ಹಾನ್, ಶಬ್ಬಿರ್ ಮಲ್ಪೆ, ಬಿಲಾಲ್, ರಕ್ಷಿತ್ ಕಾಪು, ದೀಪು ಮಲ್ಪೆ, ಅಬೀಷೇಕ್ ಹಾಸನ್, ಮುಸ್ತಾಕ್ ಮಲ್ಪೆ, ಮಹೇಶ ಮಲ್ಪೆ ಮತ್ತು ಉಮಾಕಾಂತ ಹೊಸ್ಕಟ್ಟಾ ತಂಡದಲ್ಲಿದ್ದಾರೆ.
ಈಶ್ವರ್ ಮಲ್ಪೆ ಸುಮಾರು ಏಳು ಬಾರೀ ಸ್ಥಳದಲ್ಲಿ ಮುಳುಗಿ ಜಾಲಾಡಿದ್ದಾರೆ. ಆದರೆ ಅವರ ಕಣ್ಣಿಗೆ ವಾಹನವಾಗಲಿ, ಮನುಷ್ಯರಾಗಲಿ ಗೋಚರಿಸಿಲ್ಲ ಎನ್ನಲಾಗಿದೆ. ನದಿಯ ತಳಭಾಗದಲ್ಲಿ ರಾಶಿ ರಾಶಿ ಕಲ್ಲುಗಳು, ಮಣ್ಣುಗಳು, ಬೃಹತ್ ಆಲದ ಮರ, ನದಿಯಲ್ಲಿ ತೇಲಿ ಬಂದ ಮರದ ತುಂಡುಗಳು ಗೋಚರಿಸಿವೆ.
ಕಾರ್ಯಾಚರಣೆ ಸಂದರ್ಭದಲ್ಲಿ ಒಮ್ಮೆ ರೋಪ್ ಕೈಗೆ ಸಿಗದೇ ಈಶ್ವರ್ ಕೊಚ್ಚಿ ಹೋಗುತ್ತಿದ್ದರು. ತಂಡದವರೇ ಅವರನ್ನ ರಕ್ಷಿಸಿದ್ದಾರೆ.
ಭಾನುವಾರ ಮತ್ತೆ ತಂಡ ಗಂಗಾವಳಿ ನದಿಯಲ್ಲಿ ಶೋಧ ಮುಂದುವರಿಸಲಿದೆ. ಆದಷ್ಟು ಬೇಗ ಎಲ್ಲರೂ ಪತ್ತೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಿ ಎಂದು ಈಶ್ವರ್ ಮಲ್ಪೆ ತಿಳಿಸಿದ್ದಾರೆ.