ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಪಡಿತರ ಯೋಜನೆಗೆ(Ration Scheme) ಸಂಬಂಧಿಸಿದ ಅಕ್ಕಿಯನ್ನು(Rice) ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಏಳು ಮಂದಿಯನ್ನು ಬಂಧಿಸಿದ ಘಟನೆ ಭಟ್ಕಳದಲ್ಲಿ ನಡೆದಿದೆ.
ಭಟ್ಕಳ ಗ್ರಾಮೀಣ(Bhatkal Rural) ಸಿಪಿಐ ಮಂಜುನಾಥ ಲಿಂಗಾರೆಡ್ಡಿ ನೇತೃತ್ವದ ತಂಡ ಹಾಗೂ ಆಹಾರ ನಿರೀಕ್ಷಕ ಉದಯ ತಳವಾರ ಅವರ ಸಹಯೋಗದಲ್ಲಿ ದಾಳಿ(Raid) ನಡೆಸಲಾಗಿತ್ತು.
ದಾಳಿಯ ಸಂದರ್ಭದಲ್ಲಿ 228 ಚೀಲ (ಪ್ರತಿ ಚೀಲ 50 ಕೆ.ಜಿ)ಗಳಲ್ಲಿ ಒಟ್ಟು 11,400 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಯಾಗಿದೆ. ಇದರ ಮೌಲ್ಯ ರೂ. 3,87,600 ಎಂದು ಅಂದಾಜಿಲಾಗಿದೆ.
ಅಕ್ಕಿ ಸಾಗಿಸಲು ಬಳಸಲಾಗಿದ್ದ ಅಶೋಕ ಲೈಲೆಂಡ್(Ashok Lylond) ಲಾರಿ, ಮಾರುತಿ ಓಮ್ನಿ ಹಾಗೂ ಅಶೋಕ ಲೈಲೆಂಡ್ ದೋಸ್ತ್ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ ಮುಗಳಿಹೊಂಡ ಗಣೇಶನಗರ, ಮಲ್ಲಿಕಾರ್ಜುನ ಆರ್.ಮಾಗಡಿ,ರಾಮನಗರ, ನಿತೀನ ಹೆಚ್.ಎನ್. ಹೊಂಬೆಗೌಡನಹಳ್ಳಿ, ಸಬೂಲ್ ಮುಗಳಿಹೊಂಡ, ಜಪ್ತಿ ಮಾಡಿದ ವಾಹನದ ಮಾಲಿಕರನ್ನ ಬಂಧಿಸಲಾಗಿದೆ.
ಈ ಕುರಿತು ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ ಅವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ(Bhatkal Rural Station) ದೂರು ದಾಖಲಿಸಿದ್ದು, ಪಿಎಸ್‌ಐ ರನ್ ಗೌಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿ : ಅಕ್ಟೋಬರ್ 26 ರಂದು ಮೀನುಗಾರ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ.
ಮುರ್ಡೇಶ್ವರದ ಯಮುನಾ ನಾಯ್ಕ ಪ್ರಕರಣದ ನೈಜ ತನಿಖೆಗೆ ಇನ್ನೇಷ್ಟು ವರ್ಷ ಬೇಕು? ಆರೋಪಿಗಳ ಬಂಧನಕ್ಕೆ ಒತ್ತಾಯ.

