ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಯಾವುದೇ ದಾಖಲೆಗಳಿಲ್ಲದೇ ಅಮೇರಿಕನ್ ಕರೆನ್ಸಿ ನೋಟುಗಳನ್ನ(American Currency Note) ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಭಟ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.
ಚಿನ್ನದಪಳ್ಳಿ ಹತ್ತಿರದ ಮುಸ್ಬಾ ಸ್ಟ್ರೀಟ್ ನಿವಾಸಿ ರುಕ್ಸುದ್ದೀನ್ ಸುಲ್ತಾನ್ ಬಾಷಾ (62) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿತನು ತನ್ನ ಸ್ಕೂಟರ್ನಲ್ಲಿ ಮಡಗಾವ್ನಿಂದ ಭಟ್ಕಳಕ್ಕೆ(Madagoan to Bhatkal) ಅಮೇರಿಕನ್ ಕರೆನ್ಸಿ ನೋಟುಗಳನ್ನು(American Currency Note) ತಂದು ಸ್ಥಳೀಯನಾದ ಕಪ್ಪಾ ಮುಜೀಬ್ಗೆ ಒಪ್ಪಿಸಲು ಮುಂದಾಗಿದ್ದ. ಭಟ್ಕಳ ನಗರ ಪೊಲೀಸ್ ಠಾಣೆಯ(Bhatkal Town Police) ಸಿಪಿಐ ದಿವಾಕರ ಪಿ. ಎಂ ಅವರ ನೇತೃತ್ವದ ತಂಡ ಶೋಧ ನಡೆಸಿ ವಶಕ್ಕೆ ಪಡೆದಿದೆ.
ಬಂಧಿತನಿಂದ 100 ಡಾಲರ್ ಮುಖಬೆಲೆಯ 14 ನೋಟುಗಳು, 50 ಡಾಲರ್ ಮುಖಬೆಲೆಯ 156 ನೋಟುಗಳನ್ನ ವಶಕ್ಕೆ ಪಡೆಯಲಾಗಿದೆ. ಒಟ್ಟು ಸುಮಾರು ₹9.20 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ(Bhatkal Town Police Station) ಪ್ರಕರಣ ದಾಖಲಿಸಲಾಗಿದ್ದು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಇದನ್ನು ಓದಿ : ಕೆಲ ಕ್ಷಣಗಳಲ್ಲಿ ಕೆಡಿಸಿಸಿ ಬ್ಯಾಂಕ್ ಫಲಿತಾಂಶ. ಗದ್ದುಗೆ ಏರುವವರು ಹೆಬ್ಬಾರೋ… ವೈದ್ಯರೋ ?
ಪಡಿತರ ಅಕ್ಕಿ ಕಳ್ಳ ಮಾರ್ಗದಲ್ಲಿ ಮಾರಾಟ. ಏಳು ಮಂದಿ ಬಂಧನ.
ಅಕ್ಟೋಬರ್ 26 ರಂದು ಮೀನುಗಾರ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ.
ಮುರ್ಡೇಶ್ವರದ ಯಮುನಾ ನಾಯ್ಕ ಪ್ರಕರಣದ ನೈಜ ತನಿಖೆಗೆ ಇನ್ನೇಷ್ಟು ವರ್ಷ ಬೇಕು? ಆರೋಪಿಗಳ ಬಂಧನಕ್ಕೆ ಒತ್ತಾಯ.

