ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ವ್ಯಕ್ತಿಯೊಬ್ಬರು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ತಮ್ಮ ಸ್ಕೂಟರನ್ನು ತೆಗೆಯುತ್ತಿದ್ದ ವೇಳೆ  ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಭಟ್ಕಳದಲ್ಲಿ ನಡೆದಿದೆ.

ನಗರದ ಹಾಶಿಮ್ ಬೇಕರಿ ಸಮೀಪ ಈ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಮೃತ ವ್ಯಕ್ತಿಯನ್ನು  ಫಜ್ಲೂರ್ ರೆಹಮಾನ್ ಶೇಕ್ (54) ಎಂದು ಗುರುತಿಸಲಾಗಿದೆ.

  ಹೋಟಲ್ ನಿಂದ ಹೊರ ಬಂದು ತಾನು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಸ್ಕೂಟರನ್ನು ತೆಗೆಯುತ್ತಿದ್ದ ವೇಳೆ ಹಠಾತ್ ಸ್ಕೂಟರ್ ಸಮೇತ ಅಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಅಲ್ಲಿದ್ದ ಸಾರ್ವಜನಿಕರು ಅವರನ್ನು ತಕ್ಷಣ ವೆಲ್ ಫೇರ್ ಆಸ್ಪತ್ರೆಗೆ(Welfare Hospital) ಸಾಗಿಸಿದ್ದರು. ಆಸ್ಪತ್ರೆಗೆ ಬರುವ ಮುನ್ನವೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ.

ಇದನ್ನು ಓದಿ: ಬಾಲಕಿ ಕೊಂದ ಪಾತಾಕಿ ಪೊಲೀಸರ ಗುಂಡೇಟಿಗೆ ಬಲಿ.

ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು

ಗರಿಗೆದರಿದ ಕರಾವಳಿ ಉತ್ಸವ. ಸಚಿವರಿಂದ 5 ಕೋಟಿ ರೂ. ಘೋಷಣೆ