ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ(Sirsi) : ಜಿಲ್ಲೆಯ ಪ್ರತಿಷ್ಠಿತ ಕೆಡಿಸಿಸಿ ಬ್ಯಾಂಕ್(KDCC Bank) ಚುನಾವಣೆಯಲ್ಲಿ  ಶಾಸಕ ಶಿವರಾಮ ಹೆಬ್ಬಾರ್(Shivaram Hebbar) ಅವರ ಬಣ ಬಾರೀ ಮುನ್ನಡೆ ಸಾಧಿಸಿದೆ.

ಸತತ ಆರನೇ ಬಾರೀಗೆ ಕೆಡಿಸಿಸಿ ಬ್ಯಾಂಕ್(KDCC Bank) ಹಾಲಿ ಅಧ್ಯಕ್ಷರಾಗಿರುವ  ಶಿವರಾಮ ಹೆಬ್ಬಾರ್(Shivaram Hebbar) ಗೆಲುವು‌ ಸಾಧಿಸಿದ್ದಾರೆ.  ಹೆಬ್ಬಾರ್ ಅವರ ವಿರುದ್ಧ ಸ್ಪರ್ಧಿಸಿದ್ದ ಗೋಪಾಲಕೃಷ್ಣ ಗಾಂವ್ಕರ್ ಅವರು ಸೋಲು ಕಂಡಿದ್ದಾರೆ.

ಶಿವರಾಮ ಹೆಬ್ಬಾರ್ ಅವರ ಬಣದಿಂದ ಸ್ಪರ್ಧಿಸಿದ್ದ ಮುಂಡಗೋಡಿನ ಎಚ್ ಎಂ ನಾಯ್ಕ ಅವರು ಮಂಕಾಳು ವೈದ್ಯ(Mankal Vaidya) ಬಣದ ಎಲ್ ಟಿ ಪಾಟೀಲ್ ಅವರಿಗೆ ಸೋಲುಣಿಸಿದ್ದಾರೆ.   ಎಲ್.ಟಿ.ಪಾಟೀಲ ಅವರು ಕೇವಲ‌ ಐದು ಮತಪಡೆದಿದ್ದು, ಎಂ ಎಚ್ ನಾಯ್ಕ ಅವರು 8 ಮತಗಳನ್ನು ಪಡೆದು ಗೆಲುವಿನ ಕೇಕೆ ಹಾಕಿದ್ದಾರೆ.

ಇಲ್ಲಿವರೆಗಿನ ಮತ ಎಣಿಕೆಯಲ್ಲಿ  ಶಿವರಾಮ್ ಹೆಬ್ಬಾರ್(Shivaram Hebbar) ಬಣದ ಆರು ಅಭ್ಯರ್ಥಿಗಳು ಗೆದ್ದಿದ್ದಾರೆ. ಮಂಕಾಳು ವೈದ್ಯ ಬಣದ ಇಬ್ಬರು ಮಾತ್ರ ಗೆದ್ದಿದ್ದಾರೆ. ಅರ್ಬನ್ ಬ್ಯಾಂಕ್ ಹಾಗೂ ಕೃಷಿಯೇತರ ಸಹಕಾರ ಸಂಘಗಳ ಕ್ಷೇತ್ರದ ಪೈಕಿ ಮೋಹನ ನಾಯಕ ಗೋಕರ್ಣ ಅವರು 92 ಮತಪಡೆದಿದ್ದು, ಮೋಹನ ನಾಯಕ ಅವರು 90 ಮತ ಪಡೆದಿದ್ದಾರೆ. ಮಹಿಳಾ ಅಭ್ಯರ್ಥಿಯಾಗಿ ಕಣಕ್ಕಿಳಿದ ಸರಸ್ವತಿ ಎನ್ ರವಿ ಅವರಿಗೆ ಕೇವಲ  4 ಮತಗಳು ಬಿದ್ದಿವೆ. ವಸಂತ ನಾಯಕ  21 ಮತಗಳನ್ನು ಪಡೆಯುವಲ್ಲಿ ಶಕ್ತರಾಗಿದ್ದಾರೆ.

ಮಾಜಿ ಎಂಎಲ್‌ಸಿ ಎಸ್ ಎಲ್ ಘೋಟ್ನೆಕರ್ ಹಳಿಯಾಳ ಕ್ಷೇತ್ರದಿಂದ ಗೆಲುವು ಕಂಡಿದ್ದಾರೆ. ಅವರು ಎದುರು ಸ್ಪರ್ಧಿಸಿದ್ದ ಸುಭಾಶ್ ಕೊರ್ವೆಕರ್ ಸೋಲನ್ನಪ್ಪಿದ್ದಾರೆ. ಅಂಕೋಲಾ, ಕುಮಟಾ, ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘಗಳ ಕ್ಷೇತ್ರದಲ್ಲಿ ಹೆಬ್ಬಾರ್ ಬಣದವರು ಮುನ್ನಡೆ ಸಾಧಿಸಿದ್ದು ಯಲ್ಲಾಪುರ ಹಾಗೂ ಹಳಿಯಾಳ ಕ್ಷೇತ್ರಗಳು ಶಿವರಾಮ ಹೆಬ್ಬಾರ್ ಅವರ ತಕ್ಕೆಗೆ ಲಭಿಸಿವೆ.

ಗೋಕರ್ಣದ ರಾಜಗೋಪಾಲ ಅಡಿ, ಜೊಯಿಡಾದ ಕೃಷ್ಣ ದೇಸಾಯಿ ಅವರು ಗೆಲುವು ಪಡೆದಿದ್ದಾರೆ.  ಮಂಕಾಳು ವೈದ್ಯ ಬಣದಿಂದ ಭಟ್ಕಳ ಹಾಗೂ ಹೊನ್ನಾವರ ಕ್ಷೇತ್ರಗಳಲ್ಲಿ ಮಾತ್ರ ಅವಿರೋಧ ಆಯ್ಕೆ ನಡೆದಿದೆ. 46 ಮತಗಳ ಎಣಿಕೆಗೆ ನ್ಯಾಯಾಲಯ ತಡೆಯಾಜ್ಞೆಯಿದೆ.
 
ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಮ ಹೆಬ್ಬಾರ್, ಯಾವುದೇ ಆಮಿಷ, ಅಹಂಕಾರ, ದರ್ಪಕ್ಕೆ ಮತದಾರರು ಮಣಿಯಲಿಲ್ಲ. ಹೀಗಾಗಿ ತಾನು ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ’ ಎಂದು ಹೇಳಿದ್ದಾರೆ.  ಜಿಲ್ಲೆಯ ರೈತರ ಹಾಗೂ ಸಹಕಾರಿ ಸಂಘಗಳ ಹಿತ ಕಾಯುವುದೇ ನನ್ನ ಆದ್ಯತೆ’ ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

ಇದನ್ನು ಓದಿ : ಅಮೇರಿಕನ್ ಕರೆನ್ಸಿ ಸಾಗಾಟ. ಭಟ್ಕಳ ವ್ಯಕ್ತಿ ಬಂಧನ

ಪಡಿತರ ಅಕ್ಕಿ ಕಳ್ಳ ಮಾರ್ಗದಲ್ಲಿ ಮಾರಾಟ. ಏಳು ಮಂದಿ ಬಂಧನ.

r