ಕಾರವಾರ : ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಿದ್ದಿ ಸಮುದಾಯದ ಯುವಕ ಪ್ರೊ ಕಬ್ಬಡಿ ಸೀಸನ್‌- 11ನಲ್ಲಿ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾನೆ.

ಸುಶೀಲ್ ಕಾಂಬ್ರೇಕರ್ (ಸಿದ್ದಿ) ಆಯ್ಕೆಯಾದ ಯುವಕನಗಿದ್ದು, ಪ್ರೊ ಕಬ್ಬಡಿಗೆ ಆಯ್ಕೆಯಾದ ಸಿದ್ದಿ ಸಮುದಾಯದ ಮೊದಲ ಯುವಕನೆನ್ನುವ ಕೀರ್ತಿಗೆ ಪಾತ್ರರಾಗಿದ್ದಾನೆ.  ಮೂಲತಃ ಹಳಿಯಾಳ ತಾಲೂಕಿನವನಾಗಿದ್ದು ಸುಶೀಲ್ ಸಿದ್ದಿ ಯಲ್ಲಾಪುರ
ಪಟ್ಟಣದ ಹೋಲಿ ರೋಜರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ. ಈತ ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ವಿಧಾನಪರಿಷತ್‌ ಸದಸ್ಯ ಶಾಂತಾರಾಂ ಸಿದ್ದಿ ಅಭಿನಂದಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಕಬ್ಬಡಿಯಲ್ಲಿ ಉತ್ತಮ ಸಾಧನೆ ಮಾಡಿ ಸಮುದಾಯಕ್ಕೆ, ಜಿಲ್ಲೆಗೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರಲಿ ಹಾಗು ಎಲ್ಲಾ ಯುವಕರಿಗೆ ಮಾದರಿಯಾಗಲಿ ಎಂದು ಅವರು ಆಶಿಸಿದ್ದಾರೆ.