ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ(Sirsi) :  ನಗರ ಠಾಣೆಯ ಪೊಲೀಸರು(Town Station Police) ಇಂದು ವಿಶೇಷ ಡ್ರೈವ್ ಹಮ್ಮಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಾ ಅಪಾಯಕಾರಿಯಾಗಿ ವಾಹನ ಚಲಾಯಿಸುವ ಸವಾರರ ಮೇಲೆ ಭಾರತೀಯ ಮೋಟಾರು ವಾಹನ ಕಾಯ್ದೆ(Motor Vehicle Act) ಕಲಂ 184 ಅಡಿ ಒಟ್ಟು ಆರು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 9 ಸಾವಿರ ರೂ. ದಂಡ ವಿಧಿಸಿದ್ದಾರೆ . ಅಲ್ಲದೆ ಸಂಚಾರ ನಿಯಮ(Traffic Rules) ಉಲ್ಲಂಘಿಸಿದ ಸವಾರರ ಡ್ರೈವಿಂಗ್ ಲೈಸೆನ್ಸ್ ರದ್ದು(Driving License Cancelled) ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು(RTO) ಶಿರಸಿರವರಿಗೆ ಪತ್ರ ಬರೆದಿದ್ದಾರೆ.
ಶಿರಸಿ ಉಪವಿಭಾಗದ ಡಿಎಸ್ಪಿ ಗೀತಾ ಪಾಟೀಲ್ ಮತ್ತು ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾರವರ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ರವರ ನೇತೃತ್ವದಲ್ಲಿ  ಎಎಸ್ಐ ರವರಾದ ನೆಲ್ಸನ್ ಮೆಂಥಾರೋ, ಸುರೇಶ ಗೊಂಜಾಳಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇತ್ತಿಚಿನ ದಿನಗಳಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವ ವೇಳೆ ರಸ್ತೆ ಅಪಘಾತಕ್ಕೆ ಒಳಗಾಗಿ ಸಾವು ನೋವುಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸರು ವಿಶೇಷ ಡ್ರೈವ್ ನಡೆಸಿ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.

ಇದನ್ನು ಓದಿ : ಹೆದ್ದಾರಿಯಲ್ಲಿ ಪಲ್ಟಿಯಾದ ಸೇಬು ಹಣ್ಣಿನ ಲಾರಿ. ರಸ್ತೆ ಸಂಚಾರಕ್ಕೆ ಕೆಲ ಕಾಲ ತಡೆ.

ಬ್ರಿಟಿಷ್‌ ಕಾಲದ ಟೋಪಿಗೆ ಗುಡ್ ಬೈ. ಇನ್ಮುಂದೆ ಪೊಲೀಸರಿಗೆ ಸ್ಲೋಚ್ ಬದಲಾಗಿ ಪೀಕ್ ಕ್ಯಾಪ್.

ಅಕ್ಟೋಬರ್ 28ಕ್ಕೆ  ಚಂಡಮಾರುತ ಅಪ್ಪಳಿಸುವ ಸಾಧ್ಯತೆ. ಹವಮಾನ ಇಲಾಖೆ ಎಚ್ಚರಿಕೆ.

ಈ ಶ್ರೀಗಂಧ ಸ್ಮಗ್ಲರ್ ಗಳಿಗೆ ಪುಷ್ಪಾ ಸಿನೇಮಾ ಪ್ರೇರಣೆ. ಪೊಲೀಸರಲ್ಲಿ  ಲಾಕ್ ಆದ ನಾಲ್ವರು ಚೋರರು.