ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ(Sexual Harassment) ನೀಡುತ್ತಿದ್ದಾರೆಂಬ  ಆರೋಪಕ್ಕೊಳಗಾದ  ಅಂಕೋಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ(Ankola Govt. first Grade College) ಉಪನ್ಯಾಸಕನ ವಿರುದ್ದ ಆಕ್ರೋಶ ಹೆಚ್ಚಾಗಿದೆ.

ತಮ್ಮ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಚಪಲ ಚೆನ್ನಿಗರಾಯ ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ಈಗ ನಾಪತ್ತೆಯಾಗಿದ್ದಾರೆ(Escape). ಆದರೆ ರಾಮಚಂದ್ರನಿಗೆ  ಆಶ್ರಯ ನೀಡಿ ಗೋವಾಗೆ(Goa) ತೆರಳಲು ಕಾರು ವ್ಯವಸ್ಥೆ ಮಾಡಿ ಸಹಕರಿಸಿದ ಆರೋಪದ ಹಿನ್ನಲೆಯಲ್ಲಿ ಗೋಕರ್ಣದ  ನಾಗರಾಜ್ ಗೌಡ ಮತ್ತು ವಾಸು ಎನ್ನುವ ಎಂಬುವವರನ್ನು  ಅಂಕೋಲಾ ಪೊಲೀಸರು(Ankola Police) ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಅಂಕೋಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕನ ವಿರುದ್ದ ವಿದ್ಯಾರ್ಥಿನಿಯರು ನೀಡಿದ ದೂರಿನಲ್ಲಿ ಲೈಂಗಿಕ ಕಿರುಕುಳ(Sexual Harassment) ಎಂದು ತಿಳಿಸಲಾಗಿತ್ತು. ಕಾಲೇಜು ಆಡಳಿತ ಮಂಡಳಿ(College Administration Board) ಆರೋಪಿತ ಉಪನ್ಯಾಸಕನ ಮೇಲೆ ಕ್ರಮ ಕೈಗೊಳ್ಳದಿದ್ದಾಗ  ಪಾಲಕರು, ಸಾರ್ವಜನಿಕರು   ಕಾಲೇಜು ಆವರಣದಲ್ಲಿ  ಪ್ರತಿಭಟನೆ ನಡೆಸಿದ್ದರು. ಉಪನ್ಯಾಸಕನನ್ನ ಅಮಾನತು(Suspend) ಮಾಡಿ  ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಪ್ರಕರಣ ಗಂಭಿರತೆ ಪಡೆದುಕೊಳ್ಳುತ್ತಿದ್ದಂತೆ  ಉಪನ್ಯಾಸಕ  ರಾಮಚಂದ್ರ ಅಂಕೋಲೆಕರ್ ತಲೆ ಮರೆಸಿಕೊಂಡಿದ್ದಾನೆ. ಆತನನ್ನು ಪತ್ತೆ ಹಚ್ಚಲು ಅಂಕೋಲಾ ಪೊಲೀಸರು(Ankola Police) ತೀವ್ರ ಶೋಧ ನಡೆಸಿದ್ದಾರೆ.

ಇದನ್ನು ಓದಿ : ಸಾಧಕ ಮೀನುಗಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ರಫೆಲ್ ಯುದ್ದ ವಿಮಾನದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು.

ಎಮ್ಮೆ ಅಡ್ಡ ಬಂದು ಎಂಬಿಬಿಎಸ್ ವಿದ್ಯಾರ್ಥಿ ದುರ್ಮರಣ. ಇನ್ನೋರ್ವ ಗಂಭೀರ.

ಬರೋಬ್ಬರಿ‌ 240 ಕೋಟಿ‌ ರೂ ಲಾಟರಿ‌ ಗೆದ್ದ ಯುವಕ. ಅದೃಷ್ಟಳಾದ ತಾಯಿ‌!

ಅಂಕೋಲಾದ ಸರಕಾರಿ ಕಾಲೇಜಿನಲ್ಲಿ ಚಪಲ ಚೆನ್ನಿಗರಾಯ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ. ಪೋಷಕರ, ವಿದ್ಯಾರ್ಥಿಗಳ ಪ್ರತಿಭಟನೆ