ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)  ಉಡುಪಿ(Udupi) : ಕಾರ್ಯಕ್ರಮವೊಂದರಲ್ಲಿ ಹಾಡು ಹಾಡುತ್ತಿದ್ದಾಗ  ಸಹಾಯಕ ಉಪನಿರೀಕ್ಷಕರೊಬ್ಬರು ಹೃದಯಾಘಾತದಿಂದ(ASI Heart Aatack) ಸಾವನ್ನಪ್ಪಿದ ಘಟನೆ  ನಡೆದಿದೆ

ವಿಶ್ವನಾಥ್ (56) ಎಂಬುವವರೇ ಮೃತಪಟ್ಟ ‌ದುರ್ದೈವಿ. ಮಲ್ಪೆ ಪೊಲೀಸ್‌ ಠಾಣೆಯ(Malpe Police Station) ಸಿಬ್ಬಂದಿಗೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ(Farewell) ಕಾರ್ಯಕ್ರಮದಲ್ಲಿ ವಿಶ್ವನಾಥ್ ಅವರು ಹಾಡುತ್ತಿರುವಾಗ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನ ಪರೀಕ್ಷಿಸಿದ ವೈದ್ಯರು  ಹೃದಯಾಘಾತದಿಂದ(Heart attack) ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ವಿಶ್ವನಾಥ ಅವರು ಈ ಹಿಂದೆ ಹಲವು ಪೊಲೀಸ್‌ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಇತ್ತೀಚಿಗಷ್ಟೇ  ಮಲ್ಪೆ ಪೊಲೀಸ್‌ ಠಾಣೆಗೆ(Malpe Police Station) ವರ್ಗಾವಣೆಯಾಗಿದ್ದರು.  ಅವರ ಹಠಾತ್ ನಿಧನಕ್ಕೆ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಸಂತಾಪ(Condolence) ಸೂಚಿಸಿದ್ದಾರೆ.

ಇದನ್ನು ಓದಿ : ಹೊನ್ನಾವರದಲ್ಲಿ ಭೀಕರ ಅಪಘಾತ. ಓರ್ವ ಸಾವು. 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ.

ನಮ್ಮ ಕುಟುಂಬದ ತೀರ್ಮಾನವೇ ಅಂತಿಮ. ಬದಲಾವಣೆಯ ತೀರ್ಮಾನವೇ ಅವರಿಂದಲೇ : ಸಚಿವ ಮಂಕಾಳ ವೈದ್ಯ.

ಎಂಇಎಸ್ ಮುಖಂಡರ ಜೊತೆ ಪೊಲೀಸ್ ಅಧಿಕಾರಿ ಸೆಲ್ಫಿ. ಕನ್ನಡಿಗರ ಆಕ್ರೋಶ.

ಕಾರ್ತಿಕ ಏಕಾದಶಿಗೆ ಆಗಮಿಸಿದ ಭಕ್ತರು. ದೇವರ ದರ್ಶನಕ್ಕೆ ತೆರಳುವಾಗ ಕಾಲ್ತುಳಿತ. ಹತ್ತು ಭಕ್ತರ ದುರ್ಮರಣ.