ಕಾರವಾರ(KARWAR) : ಬೆಂಗಳೂರಿನಿಂದ ಕಾರವಾರಕ್ಕೆ(Banglore to Karwar) ಬರುವ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ದೀಪಾವಳಿ ಹಬ್ಬದ(Deepavali Festival) ಸಂದರ್ಭದಲ್ಲಿ ಕೊಂಕಣ ರೈಲು(Konkan railway) ಮಾರ್ಗದಲ್ಲಿ ಬೆಂಗಳೂರು ಹಾಗೂ ಕಾರವಾರ ನಡುವೆ ವಿಶೇಷ ರೈಲು(Special Train) ಸಂಚರಿಸಲಿದೆ.
ಅಕ್ಟೋಬರ್ 30 ಹಾಗೂ 31ರಂದು ವಿಶೇಷ ರೈಲು ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ರೈಲು ಸಂಖ್ಯೆ 06597 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್(Sir M Vishweshwaraih Terminal) ಬೆಂಗಳೂರು ಹಾಗೂ ಕಾರವಾರ ನಡುವಿನ ಎಕ್ಸ್‌ಪ್ರೆಸ್ ರೈಲು(Express Train) ಅಕ್ಟೋಬರ್ 30 ಬುಧವಾರದಂದು ಅಪರಾಹ್ನ 1:00ಗಂಟೆಗೆ ಬೆಂಗಳೂರಿನಿಂದ ಪ್ರಯಾಣ ಆರಂಭಿಸಲಿದ್ದು ಗುರುವಾರ ಮುಂಜಾನೆ 4ಗಂಟೆಗೆ ರೈಲು ಕಾರವಾರ ತಲುಪಲಿದೆ.
ಅದೇ ರೀತಿ ಅಕ್ಟೋಬರ್ 31ರ ಗುರುವಾರ ಅಪರಾಹ್ನ 12:00ಗಂಟೆಗೆ ರೈಲು ಸಂಖ್ಯೆ 06598 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಕಾರವಾರದಿಂದ ಪ್ರಯಾಣ ಬೆಳೆಸಲಿದ್ದು , ಶುಕ್ರವಾರ ಮುಂಜಾನೆ 4:00ಗಂಟೆಗೆ ಬೆಂಗಳೂರು ತಲುಪಲಿದೆ. ಈ ರೈಲಿಗೆ ಚಿಕ್ಕಬಾಣಾವರ, ಕುಣಿಗಲ್(Kunigal), ಚೆನ್ನರಾಯಪಟ್ಟಣ (ಚೆನ್ನರಾಯಪಟ್ಟಣ ), ಹಾಸನ (Hasan), ಸಕಲೇಶಪುರ (Sakaleshapura), ಸುಬ್ರಹ್ಮಣ್ಯ ರೋಡ್ (Subrahamanya Road), ಕಬಕ ಪುತ್ತೂರು (Kabaka Putturu), ಬಂಟ್ವಾಳ (Bantwal), ಸುರತ್ಕಲ್(Suratkal), ಮುಲ್ಕಿ(Mulki), ಉಡುಪಿ(Udupi), ಬಾರಕೂರು (Barkuru), ಕುಂದಾಪುರ (Kundapur), ಮೂಕಾಂಬಿಕಾ ರೋಡ್ ಬೈಂದೂರು (Mookambika Road Bynduru), ಭಟ್ಕಳ (Bhatkal), ಮುರ್ಡೇಶ್ವರ (Murdeshwar), ಹೊನ್ನಾವರ(Honnavar), ಕುಮಟಾ (Kumta), ಗೋಕರ್ಣ ರೋಡ್(Gokarn Road) ಹಾಗೂ ಅಂಕೋಲಾ(Ankola) ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಈ ರೈಲು 3ಟಯರ್ ಎಸಿ-2, ಸ್ಲೀಪರ್ ಕೋಚ್-10, ಜನರಲ್ ಕೋಚ್-4, ಎಸ್‌ಎಲ್‌ಆರ್-2 ಸೇರಿದಂತೆ ಒಟ್ಟು 18 ಕೋಚ್‌ಗಳೊಂದಿಗೆ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ
ಇದನ್ನು ಓದಿ : ರೈತನ ಮೇಲೆ ಕರಡಿ ದಾಳಿ