ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಾರ್ಮಿಕರನ್ನ ಹೊತ್ತೊಯ್ಯುತ್ತಿದ್ದ ಟೆಂಪೋವೊಂದು ಪಲ್ಟಿಯಾದ(Tempo Overturn) ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಕೈಗಾ ಅಣು ವಿದ್ಯುತ್ ಘಟಕದಿಂದ(Kaiga Plant) ಮಲ್ಲಾಪುರ ಟೌನ್ಶಿಪ್(Mallapur Township) ಕಡೆಗೆ ಬರುತ್ತಿದ್ದ ಖಾಸಗಿ ಟೆಂಪೋ ಪಲ್ಟಿಯಾಗಿದೆ. ಪರಿಣಾಮವಾಗಿ 16 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹೊರಗುತ್ತಿಗೆ ಕಾರ್ಮಿಕರು(Outsource Labours) ರಾತ್ರಿ ಶಿಫ್ಟ್ ಮುಗಿಸಿಕೊಂಡು ಬೆಳಿಗ್ಗೆ ಟೆಂಪೋದಲ್ಲಿ ಟೌನ್ಶಿಪ್ ಕಡೆಗೆ ಮರಳುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟೆಂಪೋ ರಸ್ತೆ ಬದಿಗೆ ಪಲ್ಟಿಯಾಗಿದೆ. ಘಟನೆಯಲ್ಲಿ 16 ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯರ ಸಹಕಾರದಿಂದ ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ(Krims Hospital) ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮಲ್ಲಾಪುರ ಪೊಲೀಸರು(Mallapur Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಲ್ಟಿಯಾದ ಟೆಂಪೋವನ್ನು ಕ್ರೇನ್ ಸಹಾಯದಿಂದ ತೆರವುಗೊಳಿಸಲಾಗಿದೆ.
ಇದನ್ನು ಓದಿ : 45 ವರ್ಷವಾದರೂ ಮದುವೆಯಾಗಿಲ್ಲ. ಚಾಕು ಇರಿದುಕೊಂಡ ಆತ್ಮತ್ಯೆಗೆ ಯತ್ನಿಸಿದ ಕಾರವಾರದ ವ್ಯಕ್ತಿ.*
ಮುರ್ಡೇಶ್ವರದಲ್ಲಿ ಮಂಗಳಮುಖಿಯರ ದೌರ್ಜನ್ಯ. ಬೈಕ್ ಸವಾರನ ಸರ ಕಿತ್ತು ಪರಾರಿ.
ವಿದ್ಯುತ್ ಶಾಕ್ ಗೆ ಜೋಡಿಯಾನೆ ಬಲಿ. ಜಮೀನು ಮಾಲೀಕನ ಮೇಲೆ ಪ್ರಕರಣ.
ಸಿಗ್ನಲ್ ಮೀರಿ ಬಂದ ಅಂಬುಲೆನ್ಸ್. ಭಟ್ಕಳದ ದಂಪತಿ ದುರ್ಮರಣ. ಮಕ್ಕಳು ಅನಾಥ.
	
						
							
			
			
			
			
