ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ಜಂಕ್ ಆಹಾರ(Junk Food) ಪದಾರ್ಥಗಳು, ಸಿಹಿಸಿಹಿ ಚಾಕ್ಲೇಟ್(Chaclote), ಬಿಸ್ಕಿಟ್ ಗಳು(Biscuits) ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅನಾರೋಗ್ಯಕರ ಪುಡ್ ಗಳು(Unhealthy Food) ಹೇಗೆ ಪರಿಷಾಮ ಬೀರುತ್ತಿವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.

ದಾಂಡೇಲಿಯ(Dandeli) ಖಾಸಗಿ ಶಾಲೆಯ ಯುಕೆಜಿ ವಿದ್ಯಾರ್ಥಿಯೊಬ್ಬನಿಗೆ ತಾಯಿ ಕಳುಹಿಸಿದ ಸ್ನ್ಯಾಕ್ಸ್ ನಲ್ಲಿ(Snacks) ಹುಳುಗಳಿರೋದು(Worms) ಕಂಡು ಬಂದಿದೆ. ಮಗು ಟಿಫಿನ್ ಬಾಕ್ಸ್ ತೆರೆಯುವಾಗ ಬಿಸ್ಕೆಟ್‌ನಲ್ಲಿ ಹುಳು ಇರುವುದನ್ನು ಗಮನಿಸಿ ತಕ್ಷಣವೇ ಶಿಕ್ಷಕರಿಗೆ ತಿಳಿಸಿದೆ.

ಈ ಕುರಿತು ಶಾಲಾ ಶಿಕ್ಷಕರು ಪೋಷಕರಿಗೆ ಎಚ್ಚರಿಕೆ ನೀಡಿ, ಮಕ್ಕಳಿಗೆ ಟಿಫಿನ್ ಸಿದ್ಧಪಡಿಸುವ ವೇಳೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ಹೊರಗಿನ ತಿಂಡಿ ಪದಾರ್ಥಗಳ ಬದಲು ಮನೆಯಲ್ಲೇ ತಯಾರಿಸಿದ ಆಹಾರ ನೀಡುವಂತೆ ಹೇಳಿದ್ದಾರೆ.

ಮಕ್ಕಳ ಆರೋಗ್ಯದ ಮೇಲೆ ಮಾರುಕಟ್ಟೆಯಲ್ಲಿನ ಆಹಾರ ಪದಾರ್ಥಗಳು ಯಾವ ರೀತಿ ಅನಾರೋಗ್ಯ ಉಂಟು ಮಾಡುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದ್ದು ಪಾಲಕರು ಮಗುವಿನ  ಬೆಳವಣಿಗೆಗೆ  ಉತ್ತಮ ಆಹಾರಗಳನ್ನು ನೀಡುವುದು ಒಳಿತು.

ಇದನ್ನು ಓದಿ : ನವೆಂಬರ್ 28ರಂದು ಗೋಕರ್ಣ ಪರ್ತಗಾಳಿಗೆ ಪ್ರಧಾನಿ ನರೇಂದ್ರ ಮೋದಿ .ಶ್ರೀರಾಮನ ಕಂಚಿನ ಮೂರ್ತಿ‌ ಅನಾವರಣ.

ರಾತ್ರಿ ರಸ್ತೆಯಲ್ಲಿ ಬೃಹತ್ ಕಾಡಾನೆ ಪ್ರತ್ಯಕ್ಷ.  ವಾಹನ ಸವಾರರ ಎದೆಯಲ್ಲಿ ನಡುಕ.

ಆಸ್ತಿ ವಿಚಾರದಲ್ಲಿ ಕಲಹ. ತಂದೆಯನ್ನ ಕೊಗೈದ ಪುತ್ರ.*

ಹಾಸ್ಟೆಲ್ ನಿಂದ ಮೂವರು ವಿದ್ಯಾರ್ಥಿನಿಯರು ಕಾಣೆ. ಪತ್ತೆ ಮಾಡಿ ಕರೆ ತಂದ ಪೊಲೀಸರು.