ಭಟ್ಕಳ (Bhatkal): ಸಂಜೀವಿನಿ(Sanjeevini) ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ದನ ಸಂಸ್ಥೆ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತಾಲೂಕು ಪಂಚಾಯತ್ ಭಟ್ಕಳ, ಮಾಣಿಕ್ಯ ಸಂಜೀವಿನಿ(Manikya Sanjeevini) ಗ್ರಾಮ ಪಂ ಮಟ್ಟದ ಒಕ್ಕೂಟ, ಗ್ರಾಮ ಪಂಚಾಯತ್ ಮುಂಡಳ್ಳಿ (Grama Panchayat Mundalli) ಇದರ 2023-24ನೇ ಸಾಲಿನ ವಾರ್ಷಿಕ ಸರ್ವ ಸಾಮಾನ್ಯ ಸಭೆಯನ್ನು ಮುಂಡಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಆಯುಷ್ಮಾನ್ ಆರೋಗ್ಯ ಭಾರತ (Ayushman Arogya Bharat) ಸಿಎಚ್ಒ ಕುಮಾರಿ ಚೈತನ್ಯ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮನುಷ್ಯರಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಯೋಗ
ಸಹಕಾರಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸುಮಂಗಲ ಭಟ್ಟ ಮಾತನಾಡಿ, ನಮ್ಮ ಒಕ್ಕೂಟದಿಂದ ಸಾಲ ಪಡೆದವರು ಯಾವುದೇ ರೀತಿಯ ಕಂತು ಬಾಕಿ ಇರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕು ವಲಯ ಒಕ್ಕೂಟದ ಮೇಲ್ವಿಚಾರಕ ಗೋಪಾಲ್ ನಾಯ್ಕ ಸಂಘ ರಚನೆ ಮತ್ತು ಸಂಘದ ಪ್ರಾಮುಖ್ಯತೆ ಒಕ್ಕೂಟದಿಂದ ಮಹಿಳೆಯರಿಗೆ ಯಾವ ರೀತಿ ಸಾಲ ಸೌಲಭ್ಯ ಪಡೆದುಕೊಳ್ಳಬೇಕು. ಜೊತೆಗೆ ಸಂಘದಿಂದ ಮಹಿಳೆಯರ ಜೀವನೋಪಾಯದ ಮಾದರಿ ಹೇಗಿರುತ್ತದೆ. ಸಂಘದಿಂದ ಮಹಿಳೆಯರ ಸಬಲೀಕರಣ ಸ್ವಂತ ಉದ್ಯೋಗ ಬಗ್ಗೆ ಸವಿಸ್ತಾರವಾಗಿ ಒಕ್ಕೂಟದ ಸದಸ್ಯರಿಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಮಂಜಮ್ಮ ನಾಯ್ಕ, ಪಾರ್ವತಿ ನಾಯ್ಕ, ಗ್ರಾಮ ಪಂಚಾಯತ ಕಾರ್ಯದರ್ಶಿ ಉದಯ್ ಖಾರ್ವಿ ಉಪಸ್ಥಿತರಿದ್ದರು.
ಕೃಷಿ ಸಖಿ ಗಿರಿಜಾ ಹಳ್ಳೇರ ಸ್ವಾಗತಿಸಿದರು. ಒಕ್ಕೂಟದ 2023 -24ನೇ ಸಾಲಿನ ಒಕ್ಕೂಟದ ಜಮಾ ಖರ್ಚು ಒಕ್ಕೂಟ ನಡೆದು ಬಂದ ಹಾದಿ ಸ್ವಾವಲಂಬಿ ಅಭಿವೃದ್ಧಿಯ ಬಗ್ಗೆ ಒಕ್ಕೂಟದ ಮಾಹಿತಿಯನ್ನು ವರದಿ ವಾಚನವನ್ನು ತುಳಸಿ ಮೊಗೇರ (ಎಂಬಿಕೆ) ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ಮಾಲತಿ ಹಳ್ಳೇರ ವಂದಿಸಿದರು. ಒಕ್ಕೂಟದ ಪಶುಸಖಿ ಹೇಮಾ ಆಚಾರ್ಯ ಉಪಸ್ಥಿತರಿದರು.
ಪ್ರಾರ್ಥನೆ ಗೀತೆಯನ್ನು ದೀಪ ನಾಯ್ಕ ಹಾಡಿದರು. ಮುಂಡಳ್ಳಿ ಮಾಣಿಕ್ಯ ಒಕ್ಕೂಟ ಸಂಘದ ಸದಸ್ಯರು ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದನ್ನು ಓದಿ : ಚಾರಣಕ್ಕೆ ಬಂದ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ
ಅಪ್ಪು ದೀಪಾವಳಿ ಹೆಸರಲ್ಲಿ ಬಡವರಿಗೆ ದಿನಸಿ ಕಿಟ್
ಕಾರವಾರ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಭಟ್ಕಳ ಮೂಲದ ಪ್ರೇಮಾ ಆಯ್ಕೆ