ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಯಲ್ಲಾಪುರ (Yallapur) : ತಾಲೂಕಿನ ಉಮ್ಮಚಗಿಯ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್(KVG BANK) ದರೋಡೆಗೆ ವಿಫಲ ಯತ್ನ ನಡೆದಿದೆ.
ಇಂದು ಬೆಳಗಿನ ಜಾವ ಆಗುಂತಕರು ದರೋಡೆ ಯತ್ನಿಸಿದ್ದಾರೆ(Robbery Attempt). ಬ್ಯಾಂಕ್ನ ಸೇಫ್ ಲಾಕರ್(Safe Locker) ಹಾಗೂ ಕ್ಯಾಶ್ ಕೌಂಟರ್(Cash Counter) ಹತ್ತಿರದ ಕಿಟಕಿಯನ್ನು ಕೊರೆದು ಒಳನುಗ್ಗುವ ಪ್ರಯತ್ನಿಸಿದಾಗ ಅಕಸ್ಮಾತ್ ಸೈರನ್(Sairan) ಶಬ್ಧ ಮೊಳಗಿದೆ. ಗಾಬರಿಗೊಂಡ ಕಳ್ಳರು ಬ್ಯಾಂಕ್ ಒಳಗೇ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿದ ತಕ್ಷಣ ಶಿರಸಿ ಉಪವಿಭಾಗದ(Sirsi Sub Division) ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಯಲ್ಲಾಪುರ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಹಾನಾಪುರ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ನ ಒಳಭಾಗದ ಸಿಸಿಟಿವಿ ದೃಶ್ಯಗಳು ಹಾಗೂ ಸುಟ್ಟುಹೋದ ಸಾಮಗ್ರಿಗಳ ಪರಿಶೀಲನೆ ನಡೆಯುತ್ತಿದೆ.
ಘಟನೆಯಿಂದಾಗಿ ಗ್ರಾಮದ ನಾಗರಿಕರು ಆತಂಕಗೊಂಡಿದ್ದು ಇದು ಸ್ಥಳೀಯರ ಕೈವಾಡನ ಅಥವಾ ಹೊರಜಿಲ್ಲೆಯ ದರೋಡೆಕೋರರ ಕೃತ್ಯನಾ ಎಂಬುದರ ಬಗ್ಗೆ ಶಂಕೆ ಮೂಡಿದೆ. ಯಲ್ಲಾಪುರ ಪೊಲೀಸರು(Yallapura Police) ತನಿಖೆ ಆರಂಭಿಸಿದ್ದಾರೆ.
ಇದನ್ನು ಓದಿ : ಶಾಸಕರ ಮನೆಗೆ ನುಗ್ಗಿದ ಚಿರತೆ. ರಾತ್ರೋರಾತ್ರಿ ಶ್ವಾನದ ಮರಿ ಕಣ್ಮರೆ.
ದೆಹಲಿಯಲ್ಲಿ ಸ್ಪೋಟ. ಉತ್ತರಕನ್ನಡ ಜಿಲ್ಲೆಯಲ್ಲಿ ಬಿಗಿ ಭದ್ರತೆ. ಶ್ವಾನದಳದಿಂದ ಪರಿಶೀಲನೆ

