ಮುರ್ಡೇಶ್ವರ(MURDESHWAR) : ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನ ಮಟ್ಟ ಹಾಕಲು ಪೊಲೀಸ್ ಇಲಾಖೆ ಮುಂದಾಗುತ್ತಿದೆ . ಮುರ್ಡೇಶ್ವರದ ಬಸ್ತಿ ಬಾಕಡಕೇರಿ ಬಳಿ ಪೊಲೀಸರು ಕೋಳಿ ಅಂಕದ ಮೇಲೆ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಎರಡು ಆಟೋ, ಕಾರು ಹಾಗೂ ಬೈಕ್ ಗಳನ್ನ ಪೊಲೀಸರು ಜಪ್ತಿ ಮಾಡಲಾಗಿದ್ದು, ಸ್ಥಳದಲ್ಲಿ 1080ರೂ ನಗದು, ಒಂದು ಜೀವಂತ ಕೋಳಿ ಹಾಗೂ ಇನ್ನೊಂದು ಪಡೆಯಲ್ಲಿ ಮರಣವಪ್ಪಿದ ಕೋಳಿ ವಶಕ್ಕೆ ಪಡೆಯಲಾಗಿದೆ.
ಘಟನೆಗೆ ಸಂಬಂಧಿಸಿ ಇಬ್ಬರನ್ನ ಬಂಧಿಸಲಾಗಿದೆ. ಶಿರಾಲಿಯ ರವಿ ಶನಿಯಾರ ನಾಯ್ಕ (38), ಹಾಡುವಳ್ಳಿಯ ಸೋಮಯ್ಯ ನಾಗಪ್ಪ ಗೊಂಡ (36) ಬಂಧಿತರು.
ಮುರ್ಡೇಶ್ವರ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಕೋಳಿ ಅಂಕ ನಡೆಯುತ್ತಿದೆ ಎಂಬ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರ ಸೂಚನೆ ಮೇರೆಗೆ ಪಿಎಸ್ಐ ಶಿವಕುಮಾರ್ ಎಸ್ ಆರ್ ಮತ್ತು ಸಿಬ್ಬಂದಿಗಳಾದ ಸಿದ್ದು ಕಾಂಬ್ಳೆ, ಸಂಗಪ್ಪ, ಕೃಷ್ಣ ಕೊಕರೆ, ಪರಿದ್ ಮತ್ತು ವಸಂತ್ ಮುಕ್ರಿ ಈ ದಾಳಿ ನಡೆಸಿದ್ದರು. ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಇದನ್ನು ಓದಿ : ಕಾರವಾರದಲ್ಲಿ ದೇವಾಲಯ ಸರಣಿ ಕಳ್ಳತನ