ಇ ಸಮಾಚಾರ ಡಿಜಿಟಲ್ ನ್ಯೂಸ್(esamacharadigital news) ಭಟ್ಕಳ (Bhatkal) : ಸಾಗುವಳಿ ಹಕ್ಕಿಗಾಗಿ ಮೂರು ತಲೆಮಾರಿನ ನಿರ್ದಿಷ್ಟ ವಯಕ್ತಿಕ ದಾಖಲೆಗೆ ಒತ್ತಾಯಿಸತಕ್ಕದ್ದಲ್ಲ ಎಂದು ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ಭಟ್ಕಳದಲ್ಲಿ ಬುಧವಾರ  ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಅರಣ್ಯವಾಸಿಗಳ(Forestdelwellers) ಕಾನೂನು ಜಾಗೃತ ಜಾಥಾದಲ್ಲಿ ಅವರು ಮಾತನಾಡಿದರು.

ಅರಣ್ಯಹಕ್ಕುಕಾಯಿದೆ(Forest Right Act) ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳ  ಇಂತಹಪ್ರಕ್ರಿಯೆಕಾನೂನಿಗೆವ್ಯತಿರಿಕ್ತವಾಗಿದೆ ಎಂದ ಅವರು, ಸೆಪ್ಟೆಂಬರ್ 2012 ರಲ್ಲಿಯೇ ನಿರ್ದಿಷ್ಟ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂದು ಕಾಯಿದೆ ತಿದ್ದಪಡಿಯಾಗಿದ್ದು, ಇದಕ್ಕೆ ಪೂರಕವಾಗಿ ಗುಜಾರತ್ ಹೈಕೋರ್ಟ್ ಸಹಿತ ದಾಖಲೆಯ ಸಾಕ್ಷ್ಯ ಒತ್ತಾಯಿಸಲು ಅವಕಾಶವಿಲ್ಲವೆಂದು ಉಲ್ಲೇಖಿಸಿದೆ ಎಂದರು

ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯದ(Tribul Ministry) ಆದೇಶದಲ್ಲಿ ಮಂಜೂರಿ ಪ್ರಕ್ರಿಯೆಯಲ್ಲಿ  ದಾಖಲೆಗಳಿಗೆ ಆಗ್ರಹಿಸಿ ಅರ್ಜಿಗಳನ್ನು ತಿರಸ್ಕರಿಸುವುದು ಸಮಂಜಸವಲ್ಲ ಎಂದು ನಿರ್ದೇಶಿಸಿದ್ದು ಇರುತ್ತದೆ. ಅಲ್ಲದೇ, ಮೂರು ತಲೆಮಾರಿನ ಸಾಗುವಳಿ ಕ್ಷೇತ್ರದಲ್ಲಿನ ಜನವಸತಿ ಪ್ರದೇಶವೆಂದು ಪುಷ್ಠೀಕರಿಸುವುದು ಅವಶ್ಯವೆಂದು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.

     ಮಂಜೂರಿ ಪ್ರಕ್ರಿಯೆಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿ  ಪರಿಶೀಲಿಸಲಾಗಿರುವುದರಿಂದ ರಾಜ್ಯದಲ್ಲಿ‌ ಶೇ 88.90  ಅರ್ಜಿಗಳು ಹಾಗೂ ಜಿಲ್ಲೆಯಲ್ಲಿ ಶೇ 83.50 ಅರ್ಜಿ ತಿರಸ್ಕರಿಸ್ಪಟ್ಟಿದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು. 

    ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಪಾಂಡುರಂಗ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.  ಸಂಚಾಲಕ ದೇವರಾಜ ಗೊಂಡ ವಂದಿಸಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ರಪೀಕ್ , ನವೀನ್ ಜೈನ್, ಈಶ್ವರ ನಾಯ್ಕ ಹಾಡವಳ್ಳಿ, ಚಂದ್ರ ನಾಯ್ಕ ಬೈರೋಳೆ, ರತ್ನ ನಾಯ್ಕ ರಾಘವೇಂದ್ರ ಮರಾಠಿ, ವಿಮಲಾ ಮೊಗೇರ, ಕವಿತಾ ಮಂಜುನಾಥ ಗೊಂಡ, ನಾಗಮ್ಮ ಮೊಗೇರ, ದತ್ತ ನಾಯ್ಕ ಹಸವಳ್ಳಿ, ಸಬೀರ್, ಮೋಯೈದ್ದೀನ್, ನತ್ತಾರ,  ಜಮಾವೀರ್ ಜಾಬೀರ್, ಮುಂತಾದವರು ನೇತೃತ್ವ ವಹಿಸಿದರು. 

ಈ ಸಂದರ್ಭದಲ್ಲಿ ನಗರದ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದವರೆಗೆ ಜಾಥಾ ಮೆರವಣಿಗೆ ನಡೆಯಿತು. ಬಳಿಕ  ತಹಶೀಲ್ದಾರ ನಾಗೇಂದ್ರ ಕೆ ಎಸ್  ಅವರಿಗೆ ಮನವಿ ಮತ್ತು ಕಾನೂನು ಜಾಗೃತ ಕರಪತ್ರ ನೀಡಲಾಯಿತು.

ಇದನ್ನು ಓದಿ : ಉಡುಪಿಯಲ್ಲಿ ಬಾರೀ ಮಳೆ. ರಾಜ್ಯದಲ್ಲಿ ಇನ್ನೂ ಮಳೆ ನಿರೀಕ್ಷೆ.

ಡಿಸೆಂಬರ್ 7ಕ್ಕೆ ಉಡುಪಿಗೆ ನಟ ಪವನ್ ಕಲ್ಯಾಣ್. ಗೀತೋತ್ಸವದಲ್ಲಿ ಬಾಗಿಯಾಗುವ ಆಂದ್ರ ಉಪಮುಖ್ಯಮಂತ್ರಿ.

ಮನೆಯಲ್ಲಿ 60 ಕೆಜಿ ಶ್ರೀಗಂಧ. ಆರೋಪಿ ಕಬ್ಬಿನ ಗದ್ದೆಯಲ್ಲಿ ಪರಾರಿ.