ಗೋಕರ್ಣ(Gokarn) : ವಾರದ ಸಂತೆಗೆ ತರಕಾರಿ ಖರೀದಿಸಲು ಬಂದಿದ್ದ ನಾಲ್ವರಿಗೆ ಸಿಡಿಲು ಬಡಿದ ಘಟನೆ ಗೋಕರ್ಣದ ಬಿದ್ರಗೇರಿಯಲ್ಲಿ (Gokarn Bidrageri) ಸಂಭವಿಸಿದೆ.
ಬಿದ್ರಗೇರಿಯ (Bidrageri) ಪರಮೇಶ್ವರ ಗೌಡ(56), ಬಿಹಾರ ಮೂಲದ(Bihar Native) ಕಾರ್ಮಿಕರಾದ ನೂರ ಅಲಮಾ(40), ಮಹ್ಮದ್ ಆಜಾದ್ (30) ಮತ್ತು ಆಯುಷ್‌ಕುಮಾರ (30) ಗಾಯಗೊಂಡವರಾಗಿದ್ದಾರೆ.
ಇಂದು ಮಧ್ಯಾಹ್ನ ನಾಲ್ಕು ಗಂಟೆ ಸುಮಾರಿಗೆ ಭಾರಿ ಗುಡುಗು ಮಿಂಚು ಸಮೇತ ಬಾರೀ ಮಳೆ(Heavy Rain) ಅಬ್ಬರಿಸಿತ್ತು. ಸಂತೆಗೆ ಬಂದವರು ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದರು. ಆ ವೇಳೆ ಸಿಡಿಲು ಅಪ್ಪಳಿಸಿ ನಾಲ್ವರು ಗಾಯಗೊಂಡಿದ್ದಾರೆ.
ತಕ್ಷಣ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಹಾಗೂ ಡಾ. ದಿವ್ಯಾ ಮತ್ತು ಸಿಬ್ಬಂದಿಗಳು ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ್ದಾರೆ. ಸದ್ಯ ಗಾಯಾಳುಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇದನ್ನು ಓದಿ : ಮನೆಯಲ್ಲಿ ಸಂಗ್ರಹಿಸಿದ್ದ ಗೋವಾ ಮದ್ಯ ವಶಕ್ಕೆ