ಇ ಸಮಾಚಾರ ಡಿಜಿಟಲ್ನ್ಯೂಸ್(esamacharadigital news) ಹೊನ್ನಾವರ(Honnavar) : ತಾಲೂಕಿನ ಖರ್ವಾ(Kharva) ನಾಥಗೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟಕ್ಕೆ(Midday meals)  ಪೂರೈಕೆಯಾಗಿರುವ ತೊಗರಿಬೇಳೆ(Togaridal) ಕಳಪೆ ಆಗಿರುವುದನ್ನು ಖಂಡಿಸಿ ಎಸ್‌ಡಿಎಂಸಿ(SDMC) ಹಾಗೂ ಪಾಲಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಶಾಲೆಗೆ ಭೇಟಿ ನೀಡಿದ ವೇಳೆ ‌ಹುಳು ಆಗಿರುವ ಕಳಪೆ ಮಟ್ಟದ ತೊಗರಿಬೇಳೆ ಬಳಸುತ್ತಿರುವುದಕ್ಕೆ  ಮುಖ್ಯ ಶಿಕ್ಷಕಿ ಮತ್ತು ಇಲಾಖಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಸಿಯೂಟದ ಆಹಾರಧಾನ್ಯಗಳ ಹಾಗೂ ಕೊಠಡಿ ಸ್ವಚ್ಚತೆಯ ಬಗ್ಗೆ ಪರಿಶೀಲಿಸಲು ಖರ್ವಾ  ಶಾಲೆಗೆ ಇಲಾಖೆಯ ಆದೇಶದಂತೆ ಗ್ರಾಮ ಪಂಚಾಯತಿ ಪಿಡಿಒ ಗಿರೀಶ್ ನಾಯಕ ಅವರು ಭೇಟಿ ನೀಡಿದ್ದರು. ಈ ವೇಳೆ ತೊಗರಿಬೇಳೆಯಲ್ಲಿ ಹಾಳಾಗಿರುವುದು ಮತ್ತು ಅದರಲ್ಲಿ ಹುಳು ಆಗಿರುವುದು ಕಂಡುಬಂದಿದೆ. ಹೀಗಾಗಿ ಎಸ್ಡಿಎಂಸಿ ಸದಸ್ಯರು ಮತ್ತು ಪಾಲಕರು ಪರಿಶೀಲನೆ ನಡೆಸಿ ಆತಂಕ ವ್ಯಕ್ತಪಡಿಸಿದ್ದಾರೆ.

ತೊಗರಿಬೆಳೆ(Togaridal) ಇಷ್ಟೊಂದು ಕಳಪೆಯಾಗಿದ್ದರೂ ಎರಡು ಮೂರು ತಿಂಗಳು ಕಳೆದರೂ ಇಲ್ಲಿನ ಪ್ರಭಾರಿ ಮುಖ್ಯಶಿಕ್ಷಕಿ ಸುಧಾ ಭಂಡಾರಿ ನಮ್ಮ ಗಮನಕ್ಕೆ ತಂದಿಲ್ಲ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ ನಾಯ್ಕ ಹಾಗೂ ಪಾಲಕರು ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಮತ್ತು ಶಾಲೆಗಳಿಗೆ ಗುಣಮಟ್ಟದ ಬೇಳೆಯನ್ನು ಪೂರೈಕೆ ಮಾಡಬೇಕು. ಇಂತಹ ಆಹಾರ ಸೇವಿಸಿದರೆ ಮಕ್ಕಳ ಆರೋಗ್ಯದ ಸ್ಥಿತಿ ಹಾಳಾಗುವುದು. ಇಲ್ಲಿಯ ಶಾಲೆಗೆ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಹಾಸ್ಟೇಲ್ನಲ್ಲಿದ್ದುಕೊಂಡು ಬರುತ್ತಾರೆ. ಅವರ ಪಾಲಕರು ಶಿಕ್ಷಕರ ಮೇಲೆ ಭರವಸೆ ಇಟ್ಟು ಮಕ್ಕಳ ಬಿಟ್ಟು ಹೋಗುತ್ತಾರೆ. ಆ ಮಕ್ಕಳಿಗೆ ಅನಾರೋಗ್ಯವಾದರೆ ಅವರ ನೋಡಿಕೊಳ್ಳುವರು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ ನಾಯ್ಕ, ಕಳಪೆ ಮಟ್ಟದ ತೊಗರಿ ಬೇಳೆ ಶಾಲೆಗಳಿಗೆ ಪೂರೈಕೆ ಆಗಿದೆ. ಸರ್ಕಾರದಿಂದ ಇಂತಹ ಆಹಾರ ಯಾಕೆ ಪೂರೈಸುತ್ತಿದೆ. ಅವರ ಮಕ್ಕಳು ಇಂತಹ ಆಹಾರ ತಿನ್ನುತ್ತಾರಾ?. ಕಾಳಜಿ ಕೇಂದ್ರದ ಸಮಯದಲ್ಲಿ ತಂದ ಆಹಾರಧಾನ್ಯ ಇದಾಗಿದೆ. ಇದು ಕಳಪೆಯಾಗಿದ್ದು ಸಂಬಂಧಿಸಿದ ಇಲಾಖೆಯವರು ವಾಪಾಸ್ ಪಡೆದು ಬೇರೆ ನೀಡಲಿ ಎಂದು ಆಗ್ರಹಿಸಿದರು. ಎಸ್ಡಿಎಂಸಿ ಸದಸ್ಯ ವೇಂಕಟಾಚಲ ನಾಯ್ಕ, ವಿನಾಯಕ ನಾಯ್ಕ, ಮಾರುತಿ, ನಾಗಪ್ಪ ಹಳ್ಳೇರ ಮತ್ತಿತರಿದ್ದರು.

ಇದನ್ನು ಓದಿ : ಭಟ್ಕಳದಲ್ಲಿ ಅರಣ್ಯವಾಸಿಗಳ ಬೃಹತ್ ಕಾನೂನು ಜಾಥಾ. ಮೂರು ತಲೆಮಾರಿನ ದಾಖಲೆ ಒತ್ತಾಯಿಸತಕ್ಕದಲ್ಲ : ರವೀಂದ್ರ ನಾಯ್ಕ

ಉಡುಪಿಯಲ್ಲಿ ಬಾರೀ ಮಳೆ. ರಾಜ್ಯದಲ್ಲಿ ಇನ್ನೂ ಮಳೆ ನಿರೀಕ್ಷೆ.