ಕಾರವಾರ(KARWAR) : ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆದು ಆದಷ್ಟು ಬೇಗ ಮನೆಗೆ ಹೋಗಬೇಕೆಂದು ಹಂಬಲಿಸುತ್ತಾರೆ. ರೋಗಿಗಳ ಸಂಬಂಧಿಕರು ಸಹ ಆಸ್ಪತ್ರೆಯ ಸಹವಾಸವೇ ಬೇಡವೇ ಬೇಡ ಅಂತಾರೆ.

ಆದರೆ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ವೈದ್ಯ ವಿದ್ಯಾರ್ಥಿಗಳೇ ಮೋಜು ಮಸ್ತಿ ಮಾಡಿದರೇ ಪರಿಸ್ಥಿತಿ ಏನಾಗಬಹುದು ಹೇಳಿ.  ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕ್ರಿಮ್ಸ್)(KARWAR MEDICAL COLLEGE) ವೈದ್ಯ ವಿದ್ಯಾರ್ಥಿಗಳು ಗಣೇಶ ಮೂರ್ತಿ ಮೆರವಣಿಗೆ ಹೆಸರಿನಲ್ಲಿ ಮಾಲಿನ್ಯ ಮಾಡಿದ್ದಾರೆ. ಶಬ್ಧ ಮಾಲಿನ್ಯ(SOUND POLLUTION), ಪರಿಸರ ಮಾಲಿನ್ಯ ಇತ್ಯಾದಿ. ಇತ್ಯಾದಿ..

ನಿನ್ನೆ ಆಸ್ಪತ್ರೆ ಆವರಣದಲ್ಲಿಯೇ ಪಟಾಕಿ ಸಿಡಿಸಿದ್ದಾರೆ. ರಾಸಾಯನಿಕ ಬಣ್ಣ ಎರಚಿಕೊಂಡು ದೊಡ್ಡದಾಗಿ ಸ್ಪೀಕರ್ ಹಾಕಿಕೊಂಡು ಕುಣಿದು ಕುಪ್ಪಳಿಸಿದ್ದಾರೆ. ಇದು ಆಸ್ಪತ್ರೆ ಒಳರೋಗಿಗಳಲ್ಲಿ  ಆತಂಕವನ್ನು ಹೆಚ್ಚು ಮಾಡಿತ್ತು. ಹಲವು ಹೊತ್ತಿನವರೆಗೆ ಆವರಣದಲ್ಲಿ ವಿದ್ಯಾರ್ಥಿಗಳ ಗಲಾಟೆಯೇ ಜೋರಾಗಿತ್ತು.

ಮಕ್ಕಳ ವಾರ್ಡಿನ ಎದುರೇ ಈ ರೀತಿಯಾಗಿ ಭಾರೀ ಪ್ರಮಾಣದ ಹೊಗೆ ಕಾಣಿಸಿತು. ಭರ್ಜರಿ ಸ್ಪೀಕರ್ ಸದ್ದು ಹೆಚ್ಚಾಗಿತ್ತು. ಮಕ್ಕಳ ವಿಶೇಷ ವಾರ್ಡ್(CHILDREN WARD), ಬಾಣಂತಿ ವಾರ್ಡ್, ಜಿಲ್ಲಾಸ್ಪತ್ರೆ ಐಸಿಯು (DISTRICT HOSPITAL ICU)ಸೇರಿ ಹಲವು ವಾರ್ಡುಗಳು ಇವೆ. ಆದರೂ, ಗಣಪತಿ ಕೂರಿಸಿದ ಸ್ಥಳದಿಂದಲೇ ನೂರಾರು ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.

ಕ್ರಿಮ್ಸ್ ಆಡಳಿತ ಮಂಡಳಿಯ ಅನುಮತಿ ಪಡೆದು ವಿದ್ಯಾರ್ಥಿಗಳು ಈ ರೀತಿ ಮಾಡಿದರಾ, ಇಲಾಖೆಯ ಅನುಮತಿ ಪಡೆದಿದ್ದಾರಾ? ಅನುಮತಿ ನೀಡಿದರೂ ರೋಗಿಗಳ ಬಗ್ಗೆ ವಿಚಾರ ಯಾಕೆ ಮಾಡಿಲ್ಲ ಎಂಬುದು ಪ್ರಶ್ನೆಯಾಗಿದೆ.

ಆಸ್ಪತ್ರೆ ಅಂದರೆ ಅದು ಅತ್ಯಂತ ಸೂಕ್ಷ್ಮ ಪ್ರದೇಶ. ರೋಗಿಗಳ ಬಳಿ ಹೋಗುವಾಗ ವೈದ್ಯರು ಮಾಸ್ಕ್ ಧರಿಸುತ್ತಾರೆ. ಆದರೆ ಪಟಾಕಿಯ ಸದ್ದು , ರಾಸಾಯನಿಕ ಬಣ್ಣ ಬಳಸಿದರೆ ರೋಗಿಗಳಿಗೆ ತೊಂದರೆಯಾಗುವುದಿಲ್ಲವೇ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕಾದವರು ಯಾರು. ವೈದ್ಯ ವಿದ್ಯಾರ್ಥಿಗಳ ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಆಸ್ಪತ್ರೆಯಿಂದ 100 ಮೀಟರ್ ವ್ಯಾಪ್ತಿಯಲ್ಲಿ ಮಾಲಿನ್ಯ ಮಾಡುವಂತಿಲ್ಲ. ಆದರೆ ರೋಗಿಗಳಿರುವ ವಾರ್ಡುಗಳ ಬಳಿಯೇ ಭಾರೀ ಗದ್ದಲ ಸೃಷ್ಟಿಸಲಾಗಿದೆ. ಈ ಬಾರೀ ಸರ್ಕಾರದಿಂದಲೂ ಡಿಜೆಗೆ ನಿರ್ಬಂಧ ವಿಧಿಸಲಾಗಿತ್ತು. ಪೋಲೀಸರ ಸೂಚನೆ ಮೇರೆಗೆ ಡಿಜೆ ನಿಲ್ಲಿಸಿ, ಸ್ಪೀಕರ್ ಸದ್ದಿನೊಂದಿಗೆ ತೆರಳಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಲಿಲ್ಲ ಯಾಕೆ ಎಂಬುದೇ ಪ್ರಶ್ನೆಯಾಗಿದೆ.

ಇದನ್ನು ಓದಿ : ಲಿಫ್ಟ್ ತುಂಡಾಗಿ ಕಾರ್ಮಿಕ ಸಾವು

ಗೋಕರ್ಣದಲ್ಲಿ ವಿದ್ಯಾರ್ಥಿ ನೀರುಪಾಲು

ನೌಕಪಡೆಯಲ್ಲಿ ರಾರಾಜಲಿಸಲಿದೆ ಕರಾವಳಿಯ ಈ ಊರ ಹೆಸರು