ಭಟ್ಕಳ(BHATKAL):  ಕರ್ನಾಟಕ ಅಥ್ಲೆಟಿಕ್ ಅಸೋಶಿಯೇಶನ್ (KARNATAKA ATHLETIC ASSOCIATION) ಆಯೋಜಿಸಿದ ರಾಜ್ಯ ಮಟ್ಟದ ಜಾವಲೀನ್ ಥ್ರೋ (JAVELIN THROW) ಸ್ಪರ್ಧೆಯಲ್ಲಿ ಭಟ್ಕಳ (BHATKAL) ತಾಲೂಕಿನ ಶಿರಾಲಿಯ ವಿದ್ಯಾರ್ಥಿ ಸಾಧನೆ ಮಾಡಿದ್ದಾನೆ.

ಕವೀಶ್ ಕೃಷ್ಣ ನಾಯ್ಕ ತೃತೀಯ ಸ್ಥಾನ ಪಡೆದು ಉತ್ತರ ಕನ್ನಡ(UTTARKANNADA) ಜಿಲ್ಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ. ಕರ್ನಾಟಕ ಅಥ್ಲೆಟಿಕ್ ಅಸೋಶಿಯೇಶನ್ ವತಿಯಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ (KANTHIRAV STADIUM) ಜ್ಯೂನಿಯ‌ರ್ ಅಥ್ಲೆಟಿಕ್ ಕ್ರೀಡಾಕೂಟ (JUNIOR ATHLETIC GAMES) ಆಯೋಜಿಸಲಾಗಿತ್ತು.  ಶಿರಾಲಿಯ ಕವೀಶ್ ಕೃಷ್ಣ ನಾಯ್ಕ ಭಾಗವಹಿಸಿದ್ದರು.

ಮೂಲತಃ ಬೈಲೂರು ನಿವಾಸಿಯಾಗಿರುವ ಕವೀಶ್  ಸದ್ಯ  ಶಿರಾಲಿ ಚಿತ್ರಾಪುರ ((SHIRALI CHITRAPURA) ಶ್ರೀವಲ್ಲಿ ಶಾಲೆಯ (SHRIVALI SCHOOL ) 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಶಿರಾಲಿಯ ಪ್ರೀತಿ ಸ್ಪೋರ್ಟ್ಸ್ ಕ್ಲಬ್ (PREETI SPORTS CLUB) ನ ಸದಸ್ಯನಾಗಿರುವ ಕವೀಶ್  (KAVISH) ಸಾಧನೆಗೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು, ಕ್ರೀಡಾಪ್ರೇಮಿಗಳು ಅಭಿನಂದಿಸಿದ್ದಾರೆ. ಮುಂದೆಯೂ ಕೂಡ ಇನ್ನೂ ಸಾಧನೆ ಮಾಡಿ ರಾಜ್ಯ ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದ್ದಾರೆ.