ಕಾರವಾರ : ಸಮುದ್ರದಲ್ಲಿ ಮೀನುಗಾರಿಕೆಗೆ ನಿರ್ಬಂಧ (FISHING BAN) ವಿದ್ದರೂ ಪ್ರಕ್ಷುಬ್ದಗೊಂಡ ಕಡಲಿನಲ್ಲಿ ಮೀನುಗಾರಿಕೆ ದೋಣಿಯೊಂದು ಕಾರವಾರಕ್ಕೆ ಆಗಮಿಸಿದೆ.
ಉಡುಪಿ (UDUPI) ಜಿಲ್ಲೆಯ ಮಲ್ಪೆ (MALPE) ನೋಂದಣಿಯ ಮಹಾಗಣಪತಿ ಹೆಸರಿನ ದೋಣಿ ಇದಾಗಿದ್ದು, ಪ್ರಮೋದ್ ಕೊಟಿಯಾನ್ ಎಂಬುವರಿಗೆ ಸೇರಿದ್ದು ಎಂದು ಗೊತ್ತಾಗಿದೆ.
ಕಾರವಾರದ ಬೈತಕೋಲ್ ಬಂದರಿನಲ್ಲಿ ದೋಣಿಯಲ್ಲಿದ್ದ ಆರು ಮೀನುಗಾರರ ವಿಚಾರಣೆ ನಡೆಸಲಾಗಿದೆ. ಕರ್ನಾಟಕದ ಕರಾವಳಿಯಲ್ಲಿ (KARNATAKA COASTAL)ಈಗಾಗಲೇ ಮೀನುಗಾರಿಕೆ ಇಲಾಖೆ ಮೀನುಗಾರಿಕೆಗೆ ನಿಷೇಧ ಹೇರಿದೆ. ನಿಷೇಧವಿದ್ದರೂ ಕೂಡ ದೋಣಿ ಬಂದಿರುವುದು ಅನುಮಾನಕ್ಕೆ (SUSPECT) ಕಾರಣವಾಗಿತ್ತು.
ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರತೀಕ್ ಅವರು ದೋಣಿಯಲ್ಲಿದ್ದವರ ಮಾಹಿತಿ (INFORMATION) ಸಂಗ್ರಹಿಸಿದ್ದಾರೆ. ಮಲ್ಪೆಯಿಂದ ಅರಬ್ಬೀ ಸಮುದ್ರಕ್ಕೆ (OCEAN SEA) ತೀರದಲ್ಲಿ ನಿನ್ನೆ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಅಲೆಯ ಅಬ್ಬರದ ಕಾರಣದಿಂದ ವಾಪಸ್ ತೆರಳಲು ಸಾಧ್ಯವಾಗಿಲ್ಲ. ಹೀಗಾಗಿ ಕಾರವಾರದತ್ತ ದೋಣಿ ಬಂದಿದೆ. ಇನ್ನೂ ಸಮುದ್ರ ಶಾಂತವಾದ ಮೇಲೆ ತೆರಳುವಂತೆ ಸೂಚಿಸಲಾಗಿದೆ ಎಂದು ಸಹಾಯಕ ನಿರ್ದೇಶಕ ಪ್ರತೀಕ್ ಹೇಳಿದ್ದಾರೆ.