ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) :  ಮಾದಕ ವಸ್ತುಗಳ ಪೂರೈಕೆಗೆ ನಿಯಂತ್ರಿಸಿ  ಕಠಿಣ ಕ್ರಮ ಕೈಗೊಂಡ ಹಿನ್ನಲೆಯಲ್ಲಿ ಕಾರವಾರ ಜಿಲ್ಲಾ ಕಾರಾಗ್ರಹದಲ್ಲಿ(Karwar Jail) ಇಬ್ಬರು ಖೈದಿಗಳು(Prisoners)  ಜೈಲರ್(Jailer) ಹಾಗೂ ಮೂವರು ಸಿಬ್ಬಂದಿಯ ಹಲ್ಲೆ ನಡೆಸಿದ ಘಟನೆ ಶನಿವಾರ ನಡೆದಿದೆ.

ಮಂಗಳೂರು ಮೂಲದ ರೌಡಿಗಳಾದ(Roudis) ಮಹಮ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ್ ನಿಹಾಲ್  ಹಲ್ಲೆ ಮಾಡಿದ ವಿಚಾರಣಾಧೀನ ಖೈದಿಯಾಗಿದ್ದಾರೆ. ಘಟನೆಯಲ್ಲಿ  ಗಾಯಗೊಂಡ ಜೈಲರ್ ಕಲ್ಲಪ್ಪ ಗಸ್ತಿ ಮತ್ತು ಸಿಬ್ಬಂದಿಗಳನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಕಾಯತಿ ಸೇರಿದಂತೆ ಹಲವು  ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಅಬ್ದುಲ್ ಫಯಾನ್ ಮತ್ತು  ಕೌಶಿಕ್ ಅವರನ್ನು ಮಂಗಳೂರು ಜೈಲಿನಲ್ಲಿ(Mangalore Jail) ಕೈದಿಗಳ ಸಂಖ್ಯೆ ಹೆಚ್ಚಾದ ಕಾರಣಕ್ಕಾಗಿ ಕಾರವಾರ ಜೈಲಿಗೆ(Karwar Jail) ಸ್ಥಳಾಂತರಿಸಲಾಗಿತ್ತು. ಕೆಲ ದಿನಗಳಿಂದ ಜೈಲಿನಲ್ಲಿ ಮಾದಕ ಪದಾರ್ಥಗಳ(Drugs) ನಿಯಂತ್ರಣಕ್ಕೆ ಜೈಲರ್ ಕಲ್ಲಪ್ಪ ಸಂಪೂರ್ಣ ನಿರ್ಬಂಧ ಹೇರಿ ತಪಾಸಣೆ ಬಿಗಿಗೊಳಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಇಂದು ಬೆಳಿಗ್ಗೆ  ಆರೋಪಿಗಳು ಜೈಲರ್ ಜೊತೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ  ಜೈಲರ್ ಕಲ್ಲಪ್ಪ ಹಾಗೂ ಕರ್ತವ್ಯನಿರತ ಇತರ ಮೂವರು ಸಿಬ್ಬಂದಿಗಳ ಮೇಲೆ  ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಸಿಬ್ಬಂದಿಗಳ ಸಮವಸ್ತ್ರವನ್ನೂ ಹರಿದು ಹಾಕಿದ್ದಾರೆ.

ಗಾಯಗೊಂಡ ಜೈಲರ್ ಕಲ್ಲಪ್ಪ ಗಸ್ತಿ ಮತ್ತು ‌ವಾರ್ಡರ್ಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಹಿಂದೆಯೂ ಕೂಡ ಈ ಆರೋಪಿತರು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಆಸ್ಪತ್ರೆಯ ವಾರ್ಡಿನಲ್ಲೂ ಕೂಡ ಆರೋಪಿ ಏರು ಧ್ವನಿಯಲ್ಲಿ ಆವಾಜ್ ಹಾಕಿದ್ದಾನೆ ಎನ್ನಲಾಗಿದೆ. ಈ ಘಟನೆಯಿಂದ ಜೈಲು ಸಿಬ್ಬಂದಿಗಳು ಆತಂಕಗೊಳ್ಳುವಂತಾಗಿದೆ.
ಇದನ್ನು ಓದಿ : ಕಾರವಾರ ನಗರದಲ್ಲಿನ ಭಾನುವಾರದ ಸಂತೆ ಸ್ಥಳಾಂತರ

ಗೋಮಾಂಸ ಕಳ್ಳಸಾಗಣೆದಾರರ ಮೇಲೆ ಸಿನೀಮಾ ಶೈಲಿಯ ಪೊಲೀಸರ ಕಾರ್ಯಾಚರಣೆ