ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಂಗಳೂರು(Mangalore) :  ನಗರ ವ್ಯಾಪ್ತಿಯಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ(School College Students) ಮಾದಕದ್ರವ್ಯ ಪೂರೈಕೆ(Drugs Supply) ಮಾಡುತ್ತಿದ್ದ ನಾಲ್ವರು ಯುವಕರನ್ನು ಸಿಸಿಬಿ ಪೊಲೀಸರು(CCB Police) ಬಂಧಿಸಿದ್ದಾರೆ.

ಬಂಧಿತರನ್ನು ಬೈಂದೂರು ಮೂಲದ ಮೊಹಮ್ಮದ್ ಶಿಯಾಬ್, ಉಳ್ಳಾಲದ ಮೊಹಮ್ಮದ್ ನೌಷದ್, ಕಸಬಾ ಬೆಂಗ್ರೆಯ ಇಮ್ರಾನ್, ಹಾಗೂ ಬಂಟ್ವಾಳದ ಅಹಮ್ಮದ್ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ  ಸುಮಾರು 50 ಲಕ್ಷ ರೂ. ಮೌಲ್ಯದ 517.76 ಗ್ರಾಂ ಎಂಡಿಎಮ್‌ಎ, 10 ಲಕ್ಷ ರೂ. ಮೌಲ್ಯದ ಕಾರು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ಸಿಸಿಬಿ ಘಟಕದ(Mangalore CCB Unit) ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರ ನೇತೃತ್ವದ ತಂಡ ಖಚಿತ ಮಾಹಿತಿಯ ಮೇರೆಗೆ ಮಂಗಳೂರು–ಉಡುಪಿ ರಾಷ್ಟ್ರೀಯ ಹೆದ್ದಾರಿಯ(Mangalore-Udupi NH) ಮುಲ್ಕಿ ಠಾಣಾ(Mulki Station) ವ್ಯಾಪ್ತಿಯ ಸುಂದರಾಮ್ ಶೆಟ್ಟಿ ಕನ್ವೆನ್ಷನ್ ಹಾಲ್ ಬಳಿ ದಾಳಿ ನಡೆಸಿತು. ಈ ವೇಳೆ ಕಾರಿನಲ್ಲಿ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ವಶಪಡಿಸಿಕೊಳ್ಳಲಾಗಿದೆ.

ತನಿಖೆಯ ವೇಳೆ, ಆರೋಪಿಗಳು ಬೆಂಗಳೂರಿನಲ್ಲಿ ನೈಜೀರಿಯಾದ(Naigeriya) ವ್ಯಕ್ತಿಯೊಬ್ಬರಿಂದ ಮಾದಕವಸ್ತು ಖರೀದಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

ಇದನ್ನು ಓದಿ : ಗೋವಾ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ – 25 ಜನ ಸಜೀವ ದಹನ

ಕಾರವಾರ ಜೈಲಿನಲ್ಲಿ ಗೂಂಡಾಗಳ ದರ್ಪ. ಜೈಲರ್, ವಾರ್ಡರ್ ಗಳ ಮೇಲೆ ಹಲ್ಲೆ.