ಭಟ್ಕಳ (BHATKAL): ವಾಹನವೊಂದರಲ್ಲಿ ಹಿಂಸಾತ್ಮಕವಾಗಿ ಜಾನುವಾರು(Cattle) ಸಾಗಾಟ ಮಾಡುತ್ತಿದ್ದ ಇಬ್ಬರು ಆಸಾಮಿಗಳನ್ನ ಭಟ್ಕಳ ನಗರ ಠಾಣೆಯ ಪೊಲೀಸರು ದಾಳಿ ಬಂಧಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-66 ರಸ್ತೆ ತೆಂಗಿನಗುಂಡಿ ಕ್ರಾಸ್(tenginagundi Cross) ಸಮೀಪ ಭಟ್ಕಳ ನಗರ ಠಾಣೆಯ(Bhatkal Town Station) ಪೊಲೀಸರು ದಾಳಿ ಮಾಡಿ ವಾಹನ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಘವೇಂದ್ರ ನಾಗೇಂದ್ರ (30 ) ಬಾಳೂರು ಹೊಸಕೊಪ್ಪಲು ಗಂಡನಹಳ್ಳಿ ಕೆ.ಆರ್.ನಗರ ಮೈಸೂರು ಹಾಗೂ ಅಯೂಬ್ ಅಹ್ಮದ ರಶೀದ ಅಹ್ಮದ (40) ಹಲಗನಹಳ್ಳಿ ಪಿರಿಯಾಪಟ್ಟಣ ಮೈಸೂರು ಹಾಗೂ ಇತರರು ಎಂದು ಗುರುತಿಸಲಾಗಿದೆ.
ವದೆ ಮಾಡುವ ಉದ್ದೇಶದಿಂದ 5,50,000 ಮೌಲ್ಯದ 11 ಕೋಣಗಳು ಹಾಗೂ 2,50,000 ಮೌಲ್ಯದ 05 ಎಮ್ಮೆಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಅಶೋಕ ಲೈಲ್ಯಾಂಡ್(Ashok Lailand) ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಹಗ್ಗಗಳಿಂದ ಕಟ್ಟಿ ತುಂಬಿಕೊಂಡು ಸಾಗಾಟ ಮಾಡಿಕೊಂಡು ಸಾಗಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ-66 ರಸ್ತೆ ತೆಂಗಿನಗುಂಡಿ ಕ್ರಾಸ್ ಸಮೀಪ ದಾಳಿ ಮಾಡಿ 11 ವಾಹನ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಲ್ಲಾ ಜಾನುವಾರುಗಳನ್ನ ರಕ್ಷಿಸಲಾಗಿದೆ.(Cattle Rescue)
ಪಿ.ಐ ಗೋಪಿಕೃಷ್ಣ. ಕೆ.ಆರ್ ನೇತ್ರತ್ವದಲ್ಲಿ, ಪಿ.ಎಸ್.ಐ ಸೋಮರಾಜ ರಾಠೋಡ, ಸಿಬ್ಬಂದಿಗಳಾದ ಉದಯ ನಾಯ್ಕ, ಮಹಾಂತೇಶ ಪಮ್ಮಾರ, ಶಿವಶರಣಪ್ಪ ಶಿನ್ನೂರ, ರಾಜು ಗೊಟಗೋಡಿ, ಪರಮಾನಂದ ಉಜ್ಜಿನಕೊಪ್ಪ, ಅಪರಾದ ವಿಭಾಗದ ಸಿಬ್ಬಂದಿ ಮಹಾಂತೇಶ ಹಿರೇಮಠ ಮತ್ತು ಕೃಷ್ಣಾ ಎನ್.ಜಿ ಕಾರ್ಯಾಚರಣೆಯಲ್ಲಿದ್ದರು. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ರಸ್ತೆಯಲ್ಲಿ ಚಿರತೆ ಆತಂಕ
ಶಿರೂರು ದುರಂತ. ಎರಡು ಕುಟುಂಬಗಳಿಗೆ ಪರಿಹಾರ
ಭಟ್ಕಳ ಪೊಲೀಸರ ಮಿಂಚಿನ ಕಾರ್ಯಾಚರಣೆ