ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಉಡುಪಿ(Udupi): ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಯತ್ನಿಸಿದ ಘಟನೆ ಕುಂದಾಪುರ(Kundapur) ತಾಲೂಕಿನ ತೆಕ್ಕಟ್ಟೆಯಲ್ಲಿ(Tekkatte) ನಡೆದಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಪತಿ, ಪತ್ನಿ ಹಾಗೂ ಮಗ ಆತ್ಮಹತ್ಯೆಗೆ ಯತ್ನಿಸಿದವರು. ಅಂಕದಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧವ ದೇವಾಡಿಗ(56), ಅವರ ಮಗ ಪ್ರಸಾದ್ ದೇವಾಡಿಗ(22) ಮೃತಪಟ್ಟವರು. ಮಾಧವ ಅವರ ಪತ್ನಿ ತಾರಾ ದೇವಾಡಿಗ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಸಾಲಭಾದೆಯೆ ಸಾಮೂಹಿಕ ಆತ್ಮಹತ್ಯೆ ಯತ್ನ ಎಂಬ ಸಂಶಯ ವ್ಯಕ್ತವಾಗಿದ್ದು ಮರ್ಯಾದೆಗೆ ಅಂಜಿ ಕುಟುಂಬದವರು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಗುರುವಾರ ಬೆಳಿಗ್ಗೆ ಮನೆಯ ಸಮೀಪದಲ್ಲಿರುವ ಬಾವಿಗೆ ಹಾರಿದ್ದರು. ತಂದೆ ಮತ್ತು ಮಗ ಆತ್ಮಹತ್ಯೆಗೆ ಶರಣಾಗಿರುವುದನ್ನು ತಿಳಿದ ತಾಯಿ ತಾರಾ ದೇವಾಡಿಗ ಅವರು ಸಹ ಬಾವಿಗೆ ಹಾರಿದ್ದರು.  ಆಕ್ರಂದನದ ಧ್ವನಿ ಕೇಳಿದ ಸ್ಥಳೀಯರು ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ. ಕುಂದಾಪುರದ ಅಗ್ನಿಶಾಮಕ ದಳದ (Kundapur Fire Brigade) ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ.  ಮಹಿಳೆಯನ್ನ ಆಂಬುಲೆನ್ಸ್‌ ಸಹಾಯದಿಂದ  ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ(Kota Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ: ಕಾರವಾರ ವಾಣಿಜ್ಯ ಬಂದರಿಗೆ ಬಂದ ಪಾಕ್ ಪ್ರಜೆ. ಮೊಬೈಲ್ ಸೀಜ್.

ಪಾಕಿಸ್ತಾನದಿಂದ ಭಾರತಕ್ಕೆ ವಾಪಾಸ್ ಆದ ಬಿಎಸ್ಎಪ್ ಯೋಧ.

ಪೊಲೀಸ್ ಕಾರ್ಯಾಚರಣೆ. ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ.

ಹಾಡುವಳ್ಳಿಯ ನಾಲ್ವರ ಕೊ ಪ್ರಕರಣ. ತಂದೆಗೆ ಜೀವಾವಧಿ. ಮಗನಿಗೆ ಮರಣ ದಂಡನೆ ಶಿಕ್ಷೆ.