ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪಣಜಿ(Panjim) :  ಕ್ರಿಸ್ಮಸ್ ಮತ್ತು‌ಹೊಸ ವರ್ಷದ ಹೊಸ್ತಿಲಲ್ಲಿರುವಾಗಲೇ ಗೋವಾಕ್ಕೆ ಆಘಾತಗಳ ಮೇಲೆ ಆಘಾತ ಸಂಭವಿಸುತ್ತಿದೆ.  ಆರ್ಪೋರಾ  ನೈಟ್ ಕ್ಲಬ್ ನಲ್ಲಿ ಮೊನ್ನೆ   ಭೀಕರ ಅಗ್ನಿ ದುರಂತ(Fire Tragedy) ಸಂಭವಿಸಿದ ಬೆನ್ನಲ್ಲೆ ಮತ್ತೊಂದು ಅಗ್ನಿ ಅನಾಹುತ ಸಂಭವಿಸಿದೆ.

ಗೋವಾ ರಾಜಧಾನಿ ಪಣಜಿಯ(Goa Capital Panaji) ಕಲಾ ಅಕಾಡೆಮಿಯ(Kala Academi) ಬಳಿ ಆಯೋಜಿಸಲಾಗುತ್ತಿರುವ “ಸೆರೆಂಡಿಪಿಟಿ” ಅಂತರಾಷ್ಟ್ರೀಯ ಮಹೋತ್ಸವದ(International Mahotsav) ಬೃಹತ್ ಟೆಂಟ್ ನಲ್ಲಿ ಸೋಮವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ.  ಅಕಾಡೆಮಿಯ ಕರ್ಮಚಾರಿಗಳು(Carpenter) ನಡೆಸಿದ ಕಾರ್ಯಚರಣೆಯಿಂದಾಗಿ ಅದೃಷ್ಠವಶಾತ್ ಯಾವುದೇ ದೊಡ್ಡ ಪ್ರಮಾಣದ  ಅನಾಹುತವಾಗಿಲ್ಲ ಎಂದು ತಿಳಿದು ಬಂದಿದೆ.

ಪಣಜಿಯ ಕಲಾ ಅಕಾಡೆಮಿಯ(Panaji Kala Academy) ಬಳಿ ಸೆರೆಂಡಿಪಿಟಿ ಮಹೋತ್ಸವಕ್ಕಾಗಿ ಸೆಟ್ ಸಿದ್ಧಪಡಿಸಲಾಗುತ್ತಿತ್ತು. ವೆಲ್ಡಿಂಗ್ ಕೆಲಸ(Welding Work) ನಡೆಯುತ್ತಿದುದರಿಂದ ಬೆಂಕಿ ಕಡಿ ಅಲ್ಲಿರುವ ಸ್ಪಂಜಿನಂತಹ ವಸ್ತುವಿಗೆ ತಾಗಿ ಹೊತ್ತಿ ಉರಿದಿದೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ(Fire Brigade) ಸಿಬ್ಬಂದಿಗಳು ಹಾಗೂ ಪೋಲಿಸರು ಆಗಮಿಸುವ ಮುಂಚೆ   ಬೆಂಕಿ ನಿಯಂತ್ರಣಕ್ಕೆ ತರಲಾಗಿದೆ. ಹೀಗಾಗಿ ದೊಡ್ಡಪ್ರಮಾಣದ  ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಕಳೆದ ವರ್ಷ ಕೂಡ ಪಣಜಿಯ ಐನೊಕ್ಸ್ ನಲ್ಲಿ ಸೆಟ್ ನಿರ್ಮಾಣ ಮಾಡುವ ಸಂದರ್ಭದಲ್ಲಿಯೂ ಇದೇ ರೀತಿ ಬೆಂಕಿ ಹೊತ್ತಿಕೊಂಡಿತ್ತು.

ಗೋವಾದಲ್ಲಿ ಕ್ರಿಸ್ಮಸ್(Christmas) ಮತ್ತು ಹೊಸ ವರ್ಷ ಸಂಭ್ರಮಾಚರಣೆಗೆ(New Year Celebration) ಕೆಲವೇ ದಿನ ಬಾಕಿ ಇದೆ.  ಸಂಭ್ರಮಾಚರಣೆಗೆ ದೇಶ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನಲೆಯಲ್ಲಿ ಗೋವಾದಲ್ಲಿ ಅಲ್ಲಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ಮುನ್ನ  ಇಂತಹ ಅವಘಢಗಳು ಸಂಭವಿಸಿರುವುದು  ಪ್ರವಾಸಿಗರನ್ನು ಆತಂಕ ಪಡುವಂತಾಗಿದೆ.

ಇದನ್ನು ಓದಿ : ಗೋವಾ ದುರಂತ. ಕೂದಲೆಳೆಯಲ್ಲಿ ಪಾರಾದ ನರ್ತಕಿ. ಮಾಲೀಕನಿಗೆ ಶೋಧ.

ಜಿಂಕೆ ಚರ್ಮ–ಕಾಡುಹಂದಿ ಮಾಂಸ ಸಾಗಾಟ. ಅರಣ್ಯ ಇಲಾಖೆ ದಾಳಿ. ಐವರು ಆರೆಸ್ಟ್.

ಡಿಸೆಂಬರ್ 22ರಿಂದ ಕರಾವಳಿ ಉತ್ಸವ.  ಕಲಾವಿದರಿಂದ ಅರ್ಜಿ ಆಹ್ವಾನ

ಎಂಡಿಎಮ್‌ಎ ಸಾಗಾಟ ಪ್ರಕರಣ. ನಾಲ್ವರ ಬಂಧನ. 50 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶ

ಗೋವಾ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ – 25 ಜನ ಸಜೀವ ದಹನ