ಭಟ್ಕಳ(BHATKAL) : 2023ರ ಆಗಸ್ಟ್ ನಲ್ಲಿ ಜರುಗಿದ ಬಿಎಸ್ಸಿ(BSc) ಪರೀಕ್ಷೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ(KARNATAKA UNIVERSITY) ಭಟ್ಕಳ ತಾಲೂಕಿನ ಶಿರಾಲಿಯ ಧನಲಕ್ಷ್ಮೀ ರಾಮಚಂದ್ರ ಮೊಗೇರ ನಾಲ್ಕನೇ Rank ಪಡೆದಿದ್ದಾಳೆ.
ಈಕೆ ಭಟ್ಕಳ ಅರ್ಬನ್ ಬ್ಯಾಂಕ್(BHATKAL URBAN BANK) ಉದ್ಯೋಗಿ ರಾಮಚಂದ್ರ ನಾರಾಯಣ ಮೊಗೇರ ಹಾಗೂ ಶಿಕ್ಷಕಿ ಶಾರದಾ ರಾಮಚಂದ್ರ ಮೊಗೇರ ಅವರ ಸುಪುತ್ರಿಯಾಗಿದ್ದಾಳೆ.
ಬಿಎಸ್ಸಿಯಲ್ಲಿ ಧನಲಕ್ಷ್ಮೀ 94.03 ಶೇಕಡಾ ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಹೊನ್ನಾವರದ ಎಸ್ ಡಿ ಎಂ(SDM) ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಪ್ರಸ್ತುತ ಈಕೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ(MANGLORE UNIVERSITY) ಪ್ರಾಣಿಶಾಸ್ತ್ರ ವಿಭಾಗದಲ್ಲಿ ಎಂಎಸ್ಸಿ (MSc)ಪ್ರಥಮ ವರ್ಷ ಮುಗಿಸಿರುತ್ತಾಳೆ.
ಈಕೆ ಹಿಂದೆ ಪಿಯುಸಿಯಲ್ಲೂ ಸಹ 97ಶೇ. ಅಂಕ ಪಡೆದು ತಾಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ 6ನೇ Rank ಪಡೆದಿದ್ದಳು. ಪಠ್ಯತರ ಚಟುವಟಿಕೆಯಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾಳೆ. ಭಟ್ಕಳ ತಾಲೂಕಿನ ಝೆಮಕಾರ್(Zhenkar) ಸಂಸ್ಥೆ ಅಡಿಯಲ್ಲಿ ಕರ್ನಾಟಕ ಸಂಗೀತ ಮುಗಿಸಿರುವ ಈಕೆ, ಭರತ ನಾಟ್ಯದಲ್ಲಿ ವಿದ್ವತ್ ಅಂತಿಮ ಪರೀಕ್ಷೆಯನ್ನು ಈ ವರ್ಷ ಬರೆದಿದ್ದಾಳೆ. ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮುಂಬಯಿ ಅವರು ನಡೆಸುವ ಭರತ ನಾಟ್ಯ ಪರೀಕ್ಷೆಯ ಅಲಂಕಾರ ಪೂರ್ಣ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 7ನೇ RANK ಪಡೆದಿದ್ದಾಳೆ. ಧನಲಕ್ಷ್ಮೀ ಸಾಧನೆಗೆ ಕುಟುಂಬ ವರ್ಗ ಹಾಗೂ ಸಮಾಜದವರು ಅಭಿನಂದನೆ ಸಲ್ಲಿಸಿದ್ದಾರೆ .