ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜೋಯಿಡಾ(Joida) : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನ  ಅರಣ್ಯ ಇಲಾಖೆ(Forest Department) ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.

ಹಳಿಯಾಳ ವಿಭಾಗದ(Haliyal Division) ಜಗಲಬೇಟ ಉಪವಿಭಾಗದ ಬರ್ಚಿ ವಲಯದಲ್ಲಿ(Barchi Range) ಸೋಮವಾರ ರಾತ್ರಿ ಬರ್ಚಿ ವಲಯ ಅರಣ್ಯಾಧಿಕಾರಿ  ರಶ್ಮಿ ದೇಸಾಯಿ ಅವರಿಗೆ ಅಮಸೇತ್ ಗ್ರಾಮದಿಂದ ವೈಜಗಾಂವ್–ಶಿಂಗರಗಾಂವ್ ಕ್ರಾಸ್ ಮಾರ್ಗವಾಗಿ ದಾಂಡೇಲಿ ಮಾರ್ಗವಾಗಿ ಅಕ್ರಮವಾಗಿ ಮರಳು(Illegal Sand) ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ  ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಳಿಯಾಳ ವಿಭಾಗ ಹಾಗೂ ಜಗಲಬೇಟ ಉಪವಿಭಾಗದ(Jagalabet Division) ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದರು.

ವಲಯ ವ್ಯಾಪ್ತಿಯ ಬರ್ಚಿ ತನಿಖಾ ಠಾಣೆ (ಕ್ರಾಸ್) ಬಳಿ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸಿದ ವೇಳೆ ಟಾಟಾ ಟಿಪ್ಪರ್ ವಾಹನವನ್ನು ತಡೆದು ಪರಿಶೀಲಿಸಲಾಯಿತು. ಪರಿಶೀಲನೆಯ ಸಂದರ್ಭದಲ್ಲಿ ಟಿಪ್ಪರ್‌ನಲ್ಲಿ ಮರಳು ತುಂಬಿಕೊಂಡಿರುವುದು ಕಂಡುಬಂದಿತು. ವಾಹನ ಚಾಲಕನನ್ನು ವಿಚಾರಿಸಿದಾಗ ಮರಳು ಸಾಗಾಟಕ್ಕೆ ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲವೆಂದು ತಿಳಿಸಿದ್ದಾನೆ.

ಈ ಸಂದರ್ಭದಲ್ಲಿ ಅಮಸೇತ್ ಗ್ರಾಮದ ಶ್ಯಾಮ್ ಜೋನ್ ಮೆಂಡೋಸ ಎಂಬಾತನನ್ನು  ವಶಕ್ಕೆ ಪಡೆದು ಜೊತೆಗೆ  ಟಾಟಾ ಟಿಪ್ಪರ್ (GA-09 U 3193) ನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ವಾಹನವನ್ನು ಇಲಾಖಾ ವಶಕ್ಕೆ ಪಡೆಯಲಾಯಿತು. ಬಂಧಿತ  ಟಿಪ್ಪರ್ ಚಾಲಕ ಶಿಂಗರಗಾಂವ ಗ್ರಾಮ ಪಂಚಾಯತ(Singergav Grama Panchayat) ಅಧ್ಯಕ್ಷ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ  ಮುಂದಿನ ಕ್ರಮಕ್ಕಾಗಿ ಗ್ರಾಮೀಣ ಪೊಲೀಸ್ ಠಾಣೆ, ದಾಂಡೇಲಿ(Rural Police Station Dandeli)  ಉಪ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಶ್ಮಿ ದೇಸಾಯಿ, ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ ಹಟ್ಟಿ, ಅಮಿತ್ ಕೋಳವಿ ಹಾಗೂ ಗಸ್ತು ಅರಣ್ಯ ಪಾಲಕ ರಮೇಶ್ ಹಡಪದ,  ಮುತ್ತಪ್ಪ ತಬಲ ಮತ್ತು  ಸವಿತಾ ಬೂದಿಹಾಳ ಅವರು ಭಾಗವಹಿಸಿದ್ದರು.

ಇದನ್ನು ಓದಿ : ಅಂಕೋಲಾ: ಬ್ಯಾಂಕ್ ದರೋಡೆಗೆ ವಿಫಲ ಯತ್ನ – ಜನರಲ್ಲಿ ಆತಂಕ

ನದಿ ತಿರುವು ಯೋಜನೆಗೆ ವ್ಯಾಪಕ ವಿರೋಧ. ಶಿರಸಿಯಲ್ಲಿ ನಡೆದ ಬೃಹತ್ ಹೋರಾಟಕ್ಕೆ ಸಾವಿರಾರು ಮಂದಿ.