ಬೈಂದೂರು(BYNDOORU) :  ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು  ಮೃತಪಟ್ಟ ಘಟನೆ ಬೈಂದೂರಿನಲ್ಲಿ ಸಂಭವಿಸಿದೆ.

ಯೋಜನಾನಗರದ ನಾಗೇಂದ್ರ (13) ಹಾಗೂ ರೈಲ್ವೆ ನಿಲ್ದಾಣದ ಬಳಿಯ ಶಾನು ಮೊಹಮ್ಮದ್ ಶಫಾನ್ (13) ಮೃತ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಇವರಿಬ್ಬರು ಪರೀಕ್ಷೆ ಮುಗಿಸಿ  ಬೈಂದೂರು ನಗರ ಸಮೀಪದ ಕೆರೆಕಟ್ಟೆ ಕೆರೆಯಲ್ಲಿ ಈಜಲು ತೆರಳಿದ್ದರು ಎಂದು ಹೇಳಲಾಗುತ್ತಿದೆ.

ಇಬ್ಬರಿಗೂ ಸರಿಯಾಗಿ ಈಜಲು ಬರುತ್ತಿರಲಿಲ್ಲವಾದರೂ  ಆಟವಾಡಲು ನೀರಿಗೆ ಇಳಿದಿದ್ದಾರೆ. ಮಳೆ ಹೆಚ್ಚಿದ್ದ  ಕಾರಣ  ಯಾರೂ ಗಮನ ಹರಿಸಲಿಲ್ಲ. ಯಡ್ತರೆ ಗ್ರಾಮದವರಾದ ಇವರು ಬೈಂದೂರಿನ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ಓದುತ್ತಿದ್ದರು.

ನಿನ್ನೆ  ತಡರಾತ್ರಿವರೆಗೂ  ಬೈಂದೂರು ಪೊಲೀಸರು ಹುಡುಕಾಟ ನಡೆಸಿದ್ದರು.  ಸೇನೇಶ್ವರ ದೇಗುಲ ಹಿಂಬದಿಯ ಕೆರೆ ಸಮೀಪ ಸೈಕಲ್ ಸಿಕ್ಕಿತ್ತು. ಬಳಿಕ ಕೆರೆಯಲ್ಲಿ ಹುಡುಕಾಡಿದಾಗ ಇಬ್ಬರ ಮೃತದೇಹ ಪತ್ತೆಯಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ(BYNDURU POLICE STATION) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪ್ರತಿಭಟನೆ

ಸಿಕ್ಕಿ ಬಿದ್ದ ಪಟ್ಟಣ ಪಂಚಾಯತ್ ಸದಸ್ಯನಿಗೆ ಜೈಲು

ಎರಡು ಹುದ್ದೆ ಅನುಭವಿಸಿದ ಉಷಾ ಹೆಗಡೆಗೆ ಶಿಕ್ಷೆ