ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಪದೇ ಪದೇ ನಡೆಯುತ್ತಿದ್ದ ಐಟಿ ದಾಳಿಗೆ(IT Raid) ಹೆದರಿ ಪ್ರಖ್ಯಾತ ಉದ್ಯಮಿಯೋರ್ವರು ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಾನ್ಫಿಡೆಂಟ್ ಗ್ರೂಪ್(Confident Group) ಸಂಸ್ಥಾಪಕ – ಅಧ್ಯಕ್ಷ ಸಿ ಜೆ ರಾಯ್(C J Roy) ಶುಕ್ರವಾರ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ರಿಚ್ಮಂಡ್ ಸರ್ಕಲ್ನಲ್ಲಿರುವ(Richmond Circle) ತಮ್ಮ ಕಚೇರಿಯಲ್ಲಿ ಐಟಿ ಇಲಾಖೆಯ(IT Department) ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶೂಟ್ ಮಾಡಿಕೊಂಡು ಗಂಭೀರ ಸ್ಥಿತಿಯಲ್ಲಿ ಅವರನ್ನು ತಕ್ಷಣವೇ ಎಚ್ಎಸ್ಆರ್ ಲೇಔಟ್ನ(HSR Layout) ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನ್ನಪ್ಪಿದ್ದಾರೆ.
ಕಾನ್ಫಿಡೆಂಟ್ ಗ್ರೂಪ್ಗೆ(Confident Group) ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಐಟಿ ಇಲಾಖೆ(IT Department) ತಪಾಸಣೆ ನಡೆಸುತ್ತಿತ್ತು. ಇಂದು ಸಹ ಐಟಿ ಅಧಿಕಾರಿಗಳು ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದರು.ಒಂದು ಹಂತದಲ್ಲಿ ವಿಚಾರಣೆ ಎದುರಿಸಿ ಕೆಲವೊಂದು ದಾಖಲೆಗಳನ್ನ ಅಧಿಕಾರಿಗಳು ಕೇಳಿದ್ದರೆನ್ನಲಾಗಿದೆ. ಈ ವೇಳೆ ಉಂಟಾದ ತೀವ್ರ ಮಾನಸಿಕ ಒತ್ತಡದಿಂದ ಅವರು ಸಾವಿನ ನಿರ್ಧಾರ ತೆಗೆದುಕೊಂಡಿದ್ದಾರೆನ್ನಲಾಗಿದೆ.
ಉದ್ಯಮಿ ರಾಯ್ ಅವರು ರಿಯಲ್ ಎಸ್ಟೇಟ್(Real Estate) ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯಶಸ್ವಿ ಉದ್ಯಮ ನಡೆಸಿದ್ದು, ಕರ್ನಾಟಕ(Karnataka), ಕೇರಳ(Keral) ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ(Golf Country) ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದರು. ದೇಶದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರು, ಐಷಾರಾಮಿ ಹಾಗೂ ಸ್ಪೋರ್ಟ್ಸ್ ಕಾರುಗಳ(Sports Car) ಮೇಲೆ ಅಪಾರ ಆಸಕ್ತಿ ಹೊಂದಿದ್ದರು.
ಕೇರಳ ಮೂಲದ ಸಾಮಾನ್ಯ ವ್ಯಕ್ತಿಯಾಗಿದ್ದ ಸಿ ಜೆ ರಾಯ್, 1997ರಲ್ಲಿ ಹೆಚ್ಪಿ ಕಂಪನಿಯಲ್ಲಿ(HP Company) ಕೆಲಸ ಮಾಡುತ್ತಿದ್ದರು. ಬಳಿಕ ರಿಯಲ್ ಎಸ್ಟೇಟ್(Real Estate) ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ರಿಯಲ್ ಎಸ್ಟೇಟ್ ಉದ್ಯಮ ಆರಂಭ ಮಾಡಿ, ಸದ್ಯ ಸಾವಿರಾರು ಎಕರೆ ಭೂಮಿಯನ್ನು ಹೊಂದಿದ್ದರು.
ಉದ್ಯಮಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಿಂದ(Confident Group Office) ಐಟಿ ಅಧಿಕಾರಿಗಳು ವಾಪಸ್ ಆಗಿದ್ದಾರೆ. ರಾಯ್ ಅವರ ಅಕಾಲಿಕ ನಿಧನವು ಉದ್ಯಮ ವಲಯಕ್ಕೆ ಬರಸಿಡಿಲು ಬಡಿದಂತಾಗಿದೆ.
ಇದನ್ನು ಓದಿ : ಪೊಲೀಸರಿಗೆ ಖುಷಿ ಸುದ್ದಿ. ಬರ್ತಡೇ, ಅನಿವರ್ಸರಿಗೆ ಸಾಂದರ್ಭಿಕ ರಜೆ.
